ಕುಳಗೇರಿ ಕ್ರಾಸಿನ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರ
ಕುಳಗೇರಿ ಕ್ರಾಸ್: ಗ್ರಾಮದ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರ ಈ ಮೊದಲು ಗ್ರಾಮದ ಹೃದಯ ಭಾಗದಲ್ಲಿತ್ತು. 2017ರಲ್ಲಿ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಯಿತು. ಸ್ಥಳಾಂತರವಾಗಿ 8 ವರ್ಷಗಳು ಕಳೆದರೂ ಇನ್ನೂ ಕುಡಿಯುವ ನೀರಿನ ಸಂಪರ್ಕವಿಲ್ಲ ಎಂಬುವುದು ಆಶ್ಚರ್ಯವಾದರೂ ಸತ್ಯ.
ಈ ರೈತ ಸಂಪರ್ಕ ಕೇಂದ್ರಕ್ಕೆ 20ಕ್ಕೂ ಹೆಚ್ಚು ಗ್ರಾಮಗಳಿಂದ ಬಂದ ರೈತರು ತಂಪು ಪಾನೀಯ ಅಂಗಡಿಗಳಲ್ಲಿನ ನೀರಿನ (ವಾಟರ್) ಬಾಟಲಿ ಹಿಡಿದುಕೊಂಡು ಅಥವಾ ರೈತ ಸಂಪರ್ಕ ಕೇಂದ್ರದ ಅಕ್ಕಪಕ್ಕದಲ್ಲಿನ ರೈತರ ಕೊಳವೆಬಾವಿಗಳು ಆರಂಭವಿದ್ದರೆ ಬಾಟಲಿ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿನ ಕುಡಿಯುವ ಸ್ಟೀಲಿನ ತಂಬಿಗೆ ಪಡೆದುಕೊಂಡು ನೀರಿನ ದಾಹ ಹಿಂಗಿಸಿಕೊಳ್ಳುವ ಸ್ಥಿತಿ ಈ ರೈತ ಸಂಪರ್ಕ ಕೇಂದ್ರದ್ದಾಗಿದೆ.
ಗ್ರಾಮದ ಹೃದಯ ಭಾಗದಲ್ಲಿದ್ದ ರೈತ ಸಂಪರ್ಕ ಕೇಂದ್ರವೂ ಕೆಲವು ರೈತರುಗಳಿಗೆ ನೀರಿನ ಸಮಸ್ಯೆಯಾದರೆ, ಇನ್ನು ಕೆಲವು ರೈತರು ಪಡೆದುಕೊಂಡ ಕೃಷಿ ಪರಿಕರಣಗಳನ್ನು ರೈತ ಸಂಪರ್ಕ ಕೇಂದದಿಂದ ಸುಮಾರು 500 ಮೀಟರ್‌ವರೆಗೆ ನಡೆದುಕೊಂಡು ತಮ್ಮ ಗ್ರಾಮಗಳಿಗೆ ತೆರಳುವ ವಾಹನಗಳನ್ನು ಹಿಡಿದುಕೊಂಡು ಹೋಗಬೇಕು.
ರೈತರು ತಮ್ಮ ಸ್ವಗ್ರಾಮದಿಂದ ನೀರಡಿಕೆಯಿಂದ ಬಂದ ರೈತನಿಗೆ ರೈತ ಸಂಪರ್ಕ ಕಚೇರಿಯಲ್ಲಿ ಸಿಬ್ಬಂದಿಗೆ ಎಂದು ತಂದು ಇಟ್ಟಿರುವ ನೀರನ್ನು ಸೇವಿಸಿ ಖಾಲಿ ಮಾಡುವುದಿಂದ ಕೃಷಿ ಇಲಾಖೆ ಸಿಬ್ಬಂದಿಗೂ ತೊಂದರೆಯಾಗುತ್ತಿದೆ.
ಮುಂಗಾರು ಹಂಗಾಮಿನ ವೇಳೆ ಪ್ರತಿ ದಿನ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಸುಮಾರು 200 ಕ್ಕೂ ಹೆಚ್ಚು ರೈತರು ಬೀಜ, ಗೊಬ್ಬರ, ಕೃಷಿ ಉಪಕರಣ, ಕ್ರಿಮಿನಾಶಕ ಖರೀದಿಸಲು ಬರುತ್ತಾರೆ. ನೀರಿಗಾಗಿ ರೈತ ಸಂಪರ್ಕದಿಂದ ಮಾರುಕಟ್ಟೆ ಪ್ರದೇಶಕ್ಕೆ ಬಂದು ನೀರು ಮತ್ತು ಉಪಹಾರ ಸೇವಿಸಿ ಪುನಃ ರೈತ ಸಂಪರ್ಕ ಕೇಂದ್ರಕ್ಕೆ ತೆರಳುವಂತಹ ಪರಿಸ್ತಿತಿ ಇದೆ.
ಹಿಂಗಾರು ಹಂಗಾಮಿನಲ್ಲಿ ರೈತರ ಸಂಖ್ಯೆಯಲ್ಲಿ ಸ್ವಲ್ವ ಪ್ರಮಾಣ ಕಡಿಮೆಯಾಗುತ್ತದೆ . ಏಕೆಂದರೆ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಾವರಿ ಪ್ರದೇಶ ಹೆಚ್ಚಿರುವುದರಿಂದ ರೈತ ಸಂಪರ್ಕಕ್ಕೆ ಬರುವ ರೈತರ ಸಂಖ್ಯೆಯಲ್ಲಿ ಮುಂಗಾರು ಹಂಗಾಮಿಗೆ ಹೆಚ್ಚಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.