ADVERTISEMENT

ಬಾಗಲಕೋಟೆ: ಡಿ. 21ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 4:05 IST
Last Updated 19 ಡಿಸೆಂಬರ್ 2025, 4:05 IST
<div class="paragraphs"><p>ಸಿರಿಧಾನ್ಯ</p></div>

ಸಿರಿಧಾನ್ಯ

   

ಬಾಗಲಕೋಟೆ: ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಸಿರಿಧಾನ್ಯಗಳ ಪ್ರಚಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಡಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಏರ್ಪಡಿಸಲಾಗಿದೆ. 

ಡಿ. 21ರಂದು ಬೆಳಿಗ್ಗೆ 10ಕ್ಕೆ ಸ್ಪರ್ಧೆಯನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರು ಭಾಗವಹಿಸಲು ಅವಕಾಶವಿರುತ್ತದೆ. ವಿದ್ಯಾರ್ಥಿಗಳು, ಕೃಷಿ ಇಲಾಖೆ ಸಿಬ್ಬಂದಿಗೆ ಭಾಗವಹಿಸಲು ಅವಕಾಶ ಇರುವುದಿಲ್ಲ.

ADVERTISEMENT

ಪ್ರತಿ ಸ್ಪರ್ಧಿಗೆ ಒಂದೇ ತಿನಿಸು (ಸಿಹಿ, ಖಾರ, ದೇಸಿ ತಳಿಗಳಿಂದ ತಯಾರಿಸಿದ ಖಾದ್ಯ) ಮಾಡಲು ಅವಕಾಶವಿರುತ್ತದೆ. ಸಸ್ಯಹಾರ ತಿನಿಸುಗಳಿಗೆ ಮಾತ್ರ ಅವಕಾಶವಿದೆ. ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯ ತಿನಿಸು ಪ್ರದರ್ಶಿಸಬೇಕು.

ಅಡುಗೆಗೆ ಬಳಸಿದ ಪದಾರ್ಥಗಳ ಮಾದರಿಗಳನ್ನು ಪ್ರದರ್ಶಿಸುವುದು (ವಿಶೇಷವಾಗಿ ದೇಸಿ ತಳಿಗಳು) ಕಡ್ಡಾಯ. ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ವತಃ ತಿನಿಸನ್ನು ಅವಶ್ಯವಿರುವ ಸಾಮಗ್ರಿಗಳೊಂದಿಗೆ ತಯಾರಿಸಲು ಸಿದ್ಧರಿರಬೇಕು. ತೀರ್ಪುಗಾರರ ನಿರ್ಧಾರವೇ ಅಂತಿಮ.

ತಯಾರಿಸಿದ ತಿನಿಸುಗಳ ಪ್ರದರ್ಶನ, ತಯಾರಿಕೆಗೆ ಬಳಸಿದ ಪದಾರ್ಥಗಳು, ತೋರಿಕೆ, ರುಚಿ, ಸುವಾಸನೆ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ₹5 ಸಾವಿರ (ಪ್ರಥಮ), ₹3 ಸಾವಿರ (ದ್ವಿತೀಯ) ಹಾಗೂ ₹2 ಸಾವಿರ (ತೃತೀಯ) ಬಹುಮಾನ ನೀಡಲಾಗುವುದು.

ಭಾಗವಹಿಸಲು ಆಸಕ್ತರು ತಮ್ಮ ಹೆಸರನ್ನು ಡಿ. 20ರ ಸಂಜೆ 5ರೊಳಗೆ ತಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.