ಇಳಕಲ್ : ಇಲ್ಲಿಯ ಅಲಂಪೂರಪೇಟೆಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಅಮೀನಾ ಕೊಳೂರ ಎನ್ನುವವರು ತಮಗೆ ವಿದ್ಯಾರ್ಥಿಗಳೆದುರು ಚಪ್ಪಲಿಯಿಂದ ಹೊಡೆದುಅವಮಾನಿಸಿದ್ದಾರೆ ಎಂದು ಅದೇ ಶಾಲೆಯ ಶಿಕ್ಷಕ ಅಂದಾನಯ್ಯ ವಸ್ತ್ರದ ಪೊಲೀಸರಿಗೆ ದೂರು ನೀಡಿದ್ದಾರೆ.
‘ಸ್ವಾತಂತ್ರೋತ್ಸವ ಆಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸಲು ಅಗತ್ಯ ಸಿದ್ಧತೆ, ತಾಲೀಮು ಮಾಡಿಸುತ್ತಿದ್ದೆ. ಈ ಬಗ್ಗೆ ಮಕ್ಕಳೆದುರು ಶಿಕ್ಷಕಿ ಅಮೀನಾ ಆಕ್ಷೇಪಾರ್ಹ ಮಾತು ಆಡಿದ್ದರು. ಹೀಗೇಕೆ ಆಡಿದಿರಿ ಎಂದು ಕೇಳಿದ ನನ್ನನ್ನು ಏಕಾಏಕಿ ಚಪ್ಪಲಿಯಿಂದ ಹೊಡೆದು ಶಿಕ್ಷಕಿ ಅಮೀನಾ ಅವಮಾನಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಶಿಕ್ಷಕ ಅಂದಾನಯ್ಯ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಶಾಲೆಗೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ. ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳೂ ಸಹ ಶಾಲೆಗೆ ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.