ADVERTISEMENT

ಬೀಳಗಿ | ಇನ್ನೂ ಮುಗಿಯದ ಕಂದಗಲ್ ಭವನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 5:07 IST
Last Updated 29 ಜೂನ್ 2025, 5:07 IST

ಬೀಳಗಿ ಕ್ರಾಸ್.2ದಲ್ಲಿ ನಿರ್ಮಿಸಿರುವ ಕಂದಗಲ್ಲ ಹನಮಂತರಾಯ ರಂಗ ಮಂದಿರ

ಬೀಳಗಿ ಕ್ರಾಸ್.2ದಲ್ಲಿ ನಿರ್ಮಿಸಿರುವ ಕಂದಗಲ್ಲ ಹನಮಂತರಾಯ ರಂಗ ಮಂದಿರ

ಬೀಳಗಿ: ಬೀಳಗಿ ಎರಡನೇ ಕ್ರಾಸ್‌ನಲ್ಲಿ ನಿರ್ಮಿಸಿರುವ ರಂಗಭೂಮಿ ಕಲಾವಿದ ಕಂದಗಲ್‌ ಹನಮಂತರಾಯ ರಂಗಮಂದಿರ ಬಳಕೆಯಾಗದೆ ದೂಳು ತಿನ್ನುತ್ತಿದ್ದು, ಬೀಗ ಹಾಕಿದ ಸ್ಥಿತಿಯಲ್ಲೇ ಇದೆ

ADVERTISEMENT

ಕರ್ನಾಟಕದ ಷೇಕ್ಸ್ ಪೀಯರ್ ಎಂದೇ ಕರೆಯಲಾಗುತ್ತಿರುವ ಹೆಸರಾಂತ ನಾಟಕಕಾರ ಕಂದಗಲ್‌ ಹನುಮಂತರಾಯರು ಬೀಳಗಿ ತಾಲ್ಲೂಕಿನ ಕಂದಗಲ್ಲ ಗ್ರಾಮದವರು. ಇಡೀ ಭಾರತೀಯ ಸಂಸ್ಕೃತಿ, ಪರಂಪರೆ, ನೀತಿ, ತತ್ವ, ಉಪದೇಶ ಎಲ್ಲವನ್ನು ತಮ್ಮ ನಾಟಕಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರಿಗೆ ಅವೆಲ್ಲವುಗಳನ್ನು ಮತ್ತೊಮ್ಮೆ ಪುನರಾವಲೋಕನ ಮಾಡುವಲ್ಲಿ ಯಶಸ್ವಿಯಾದವರು ಹನುಮಂತರಾಯರು. ಇವರನ್ನು ’ಕನ್ನಡದ ಮತ್ತೊಬ್ಬ ಮುದ್ದಣ್ಣ’ ಎಂದು ಅನಕೃ ಹೆಸರಿಟ್ಟಿದ್ದರು.

ಜಾನಪದ ವಿದ್ವಾಂಸ ಶ್ರೀರಾಮ ಇಟ್ಟಣ್ಣವರ ಸಂಪಾದಿಸಿದ ‘ಕಂದಗಲ್ಲ ಸ್ಮೃತಿ ಗ್ರಂಥ’ ಹಾಗೂ ಎಸ್.ಬಿ ಅಳ್ಳಗಿಯವರ ಮಹಾಪ್ರಬಂಧ ಬಿಟ್ಟರೆ ಕಂದಗಲ್ಲ ಹನುಮಂತರಾಯರ ಕುರಿತಾಗಿ ಎಲ್ಲಿಯೂ ಗಂಭೀರವಾಗಿ ಚರ್ಚೆ, ವಿಚಾರ ಸಂಕೀರಣಗಳು, ವಿಮರ್ಶೆಗಳು ನಡೆದಂತೆ ತೋರುತ್ತಿಲ್ಲ.

ಬೀಳಗಿಯಲ್ಲಿ ಹನುಮಂತರಾಯರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಿ ದಶಕಗಳೇ ಕಳೆದು ಇಂದಿಗೆ ಕಟ್ಟಡದ ಕಾರ್ಯ ಸಂಪೂರ್ಣಗೊಂಡರು ಕಲಾವಿದರ ಕಾರ್ಯಕ್ರಮಗಳಿಗೆ ಅದನ್ನು ಒದಗಿಸುವ ಲಕ್ಷಣ ಕಾಣುತ್ತಿಲ್ಲ. ಇದು ನಾವು ಒಬ್ಬ ಹೆಸರಾಂತ ನಾಟಕಕಾರನಿಗೆ, ಕಲಾವಿದನಿಗೆ ತೋರುತ್ತಿರುವ ಅಗೌರವವೆಂದು ಹೇಳದೆ ಬೇರೆ ವಿಧಿ ಇಲ್ಲ.ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಭವನ ಸದ್ಬಳಕೆ ಆಗದಿರುವುದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಪರ್ಕ ರಸ್ತೆಯಲ್ಲಿ ಬೇಕಿದೆ ನಾಮಫಲಕ

ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸ್ವಾಗತ ಫಲಕ ಅಳವಡಿಸಬೇಕು. ನಿರ್ವಹಣೆಗೆ ಒಬ್ಬ ಸಿಬ್ಬಂದಿ ನೇಮಿಸಬೇಕು. ಭವನದಲ್ಲಿ ಲಭ್ಯವಿರುವ ಎರಡು ಕೊಠಡಿಗಳ ಪೈಕಿ ಒಂದರಲ್ಲಿ ಗ್ರಂಥಾಲಯ ಸ್ಥಾಪಿಸಿ, ರಂಗಭೂಮಿ ಹಾಗೂ ವಿವಿಧ ಕಲಾವಿದರಿಗೆ ಸಂಬಂಧಿಸಿದ ಪುಸ್ತಕಗಳನ್ನು ಇರಿಸಬೇಕು. ಓದುಗರಿಗೆ ದಿನಪತ್ರಿಕೆಗಳ ವ್ಯವಸ್ಥೆ ಮಾಡಬೇಕು’ ಎನ್ನುವುದು ಸ್ಥಳೀಯ ಕಲಾವಿದರ ಒತ್ತಾಸೆ.

ಹನುಮಂತರಾಯರ ರಂಗಮಂದಿರದ ಸುತ್ತಲೂ ಕಾಂಪೌಂಡನ್ನು ನಿರ್ಮಿಸುವ ಅವಶ್ಯಕತೆಯಿದೆ. ಅಲ್ಲದೆ ಮಹಿಳಾ ಮತ್ತು ಪುರುಷ ಕಲಾವಿದರಿಗೆ ವಸತಿ ವ್ಯವಸ್ಥೆಗಾಗಿ ಪ್ರತ್ಯೇಕವಾಗಿ ಕೊಠಡಿಗಳ ನಿರ್ಮಾಣವಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.