ಜಮಖಂಡಿ: ‘ಕಾನೂನು ವಿಭಾಗದಲ್ಲಿ ಇನ್ನೂ ಹೆಚ್ಚು ಕೃತಿಗಳು ಓದುಗರ ಕೈ ಸೇರಬೇಕಿದೆ. ವಿನೂತನ ವಸ್ತು ವಿಷಯವನ್ನು ಆಯ್ಕೆ ಮಾಡಿಕೊಂಡು ಅದನ್ನು ಕೃತಿ ರೂಪದಲ್ಲಿ ನೀಡುವ ಅವಶ್ಯಕತೆ ಇದೆ’ ಎಂದು ಆಡಳಿತಾಧಿಕಾರಿ ಪ್ರೊ.ಎಸ್.ಎಚ್. ಲಗಳಿ ಹೇಳಿದರು.
ಇಲ್ಲಿನ ದರ್ಬಾರ ಹಾಲ್‌ನಲ್ಲಿ ಈಚೆಗೆ ನಡೆದ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಕಾನೂನು ವಿದ್ಯಾಲಯದ ಪ್ರಾಚಾರ್ಯ ಹಾಗೂ ಡೀಮ್ಡ್ ವಿಶ್ವವಿದ್ಯಾಲಯದ ನಿರ್ದೇಶಕ ರಘುವೀರ ಕುಲಕರ್ಣಿ ರಚಿಸಿದ ಬಹುಸಂಸ್ಕೃತಿಯ ವಿವಿಧ ಸಂದರ್ಭಗಳಲ್ಲಿನ ವೈವಾಹಿಕ ಪರಿಹಾರಗಳು ಶೀರ್ಷಿಕೆಯ (ಮ್ಯಾಟ್ರಿ ಮೊನಿಯಲ್ ರಿಲೀಫ್ಸ್ ಇನ್ ಮಲ್ಟಿ ಕಲ್ಚರಲ್ ಕಾಂಟೆಕ್ಟ್) ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣಕುಮಾರ ಶಹಾ ಮಾತನಾಡಿ, ಜಮಖಂಡಿ ಕಾನೂನು ಕಾಲೇಜು ನಡೆದು ಬಂದ ದಾರಿಯ ಕುರಿತು ಮಾತನಾಡಿದರು.
ಹುಸೇನಮಿಯಾ ಲೇಖಕರನ್ನು ಪರಿಚಯಿಸಿದರು. ಉಪನ್ಯಾಸಕ ರಾಜಶೇಖರ ಹೊಸಟ್ಟಿ ಕೃತಿಯನ್ನು ಪರಿಚಯಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ರಘುವೀರ ಕುಲಕರ್ಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ಅಂಗಸಂಸ್ಥೆಗಳ ಮುಖ್ಯಸ್ಥರು, ನಿವೃತ್ತ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.