ADVERTISEMENT

‘ಕೆಂಡದಲ್ಲಿ ಅರಳಿದ ಮಲ್ಲಿಗೆ ಹೂ' ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:06 IST
Last Updated 18 ಆಗಸ್ಟ್ 2024, 14:06 IST
ಇಳಕಲ್ ವಿಜಯ ಮಹಾಂತೇಶ್ವರ ಸಂಸ್ಥಾನಮಠದಲ್ಲಿ ಗುರುವಾರ ಕಂಬಳಿಹಾಳದ ಈರಮ್ಮ ಡಿ. ಹೂಗಾರ ಅವರ ಜೀವನ-ಸಾಧನೆ ಕುರಿತ ‘ಕೆಂಡದಲ್ಲಿ ಅರಳಿದ ಮಲ್ಲಿಗೆ ಹೂ’ ಪುಸ್ತಕವನ್ನು ಗುರುಮಹಾಂತ ಶ್ರೀ ಲೋಕಾರ್ಪಣೆ ಮಾಡಿದರು
ಇಳಕಲ್ ವಿಜಯ ಮಹಾಂತೇಶ್ವರ ಸಂಸ್ಥಾನಮಠದಲ್ಲಿ ಗುರುವಾರ ಕಂಬಳಿಹಾಳದ ಈರಮ್ಮ ಡಿ. ಹೂಗಾರ ಅವರ ಜೀವನ-ಸಾಧನೆ ಕುರಿತ ‘ಕೆಂಡದಲ್ಲಿ ಅರಳಿದ ಮಲ್ಲಿಗೆ ಹೂ’ ಪುಸ್ತಕವನ್ನು ಗುರುಮಹಾಂತ ಶ್ರೀ ಲೋಕಾರ್ಪಣೆ ಮಾಡಿದರು   

ಇಳಕಲ್: ಇಲ್ಲಿಯ ವಿಜಯ ಮಹಾಂತೇಶ ಸಂಸ್ಥಾನಮಠದಲ್ಲಿ ಗುರುವಾರ ಕಂಬಳಿಹಾಳದ ಈರಮ್ಮ ಡಿ. ಹೂಗಾರ ಅವರ ಜೀವನ-ಸಾಧನೆಗಳ ಕುರಿತು ಸುರೇಶ ಹೂಗಾರ ಬರೆದ ‘ಕೆಂಡದಲ್ಲಿ ಅರಳಿದ ಮಲ್ಲಿಗೆ ಹೂ’ ಕೃತಿಯನ್ನು ಗುರುಮಹಾಂತ ಶ್ರೀ ಲೋಕಾರ್ಪಣೆ ಮಾಡಿದರು.

ಶ್ರೀಗಳು ಮಾತನಾಡಿ, ‘ಬಡತನದ ಕಡುಕಷ್ಟದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಟ್ಟಿರುವ ಸಾವಿರಾರು ತಾಯಂದಿರು ಈ ದೇಶ ಕಟ್ಟಿದ್ದಾರೆ. ತಾಯಂದಿರ ತ್ಯಾಗ, ಪ್ರೀತಿಗೆ ಬೆಲೆ ಕಟ್ಟಲಾಗದು. ಜೀವನದ ಸಂಧ್ಯಾಕಾಲದಲ್ಲಿ ಹಿರಿಯ ಜೀವಿಗಳು ಕುಟುಂಬದ ಇತರ ಸದಸ್ಯರು ತಾಳ್ಮೆಯಿಂದ ನಾಲ್ಕು ಮಾತು ಆಡಲಿ ಎಂದು ಬಯಸುತ್ತವೆ. ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ತಿಪ್ಪಣ್ಣ ಹೂಗಾರ ತಮ್ಮ ತಾಯಿಯನ್ನು ತ್ಯಾಗ, ಪ್ರೀತಿಯನ್ನು ಆಪ್ತತೆಯಿಂದ ನೆನೆದು ಆರ್ದ್ರಗೊಂಡಿದ್ದಾರೆ’ ಎಂದರು.

ಕೃತಿಯ ಲೇಖಕ ಮುದ್ದೇಬಿಹಾಳ ಜ್ಞಾನಭಾರತಿ ಪಿಯು ಕಾಲೇಜಿನ ಉಪನ್ಯಾಸಕ ಸುರೇಶ ಹೂಗಾರ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ವೇದಿಕೆಯ ಮೇಲೆ ‌ಅಥಣಿ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಶ್ರೀ, ಸಂತೆಕಡೂರಿನ ನವಲಿಂಗ ಶರಣರು, ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ತಿಪ್ಪಣ್ಣ ಹೂಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.