ಹುನಗುಂದ: ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಪಟ್ಟಣದಿಂದ ಕರಡಿಗೆ ಹೋಗುವ ಮಾರ್ಗದಲ್ಲಿನ ರಾಮವಾಡಗಿ ಹತ್ತಿರದ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದದೆ. ಇಲ್ಲಿ ದಾಟುವ ವೇಳೆ ನೀರಿನ ಮಧ್ಯದಲ್ಲಿ ಬಸ್ ನಿಂತುಬಿಟ್ಟಿದೆ.
ಗ್ರಾಮಸ್ಥರು ಟ್ರ್ಯಾಕ್ಟರ್ ಸಹಾಯದಿಂದ ಬಸ್ ಅನ್ನು ನೀರಿನಿಂದ ಹೊರಗಡೆ ತಂದರು.
ಹುನಗುಂದದಿಂದ ಕರಡಿ ಮಾರ್ಗದಲ್ಲಿ ಬರುವ ರಾಮವಾಡಗಿ ಮತ್ತು ಬೇಕಮಲದಿನ್ನಿ ಗ್ರಾಮದ ಹತ್ತಿರ ಹಳ್ಳಗಳಿಗೆ ಕೆಳಸೇತುವೆ ನಿರ್ಮಿಸಲಾಗಿದ್ದು, ಅವು ಕಿರಿದಾಗಿವೆ. ಸ್ವಲ್ಪ ಮಳೆ ಆದರೂ ತುಂಬಿ ಹರಿಯುತ್ತವೆ. ಹೀಗಾಗಿ ಎತ್ತರದ ಸೇತುವೆಗಳನ್ನು ನಿರ್ಮಿಸುವಂತೆ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಮಾಡುತ್ತಲೇ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.