ಹುನಗುಂದ: ಮೊಹರಂ ಹಬ್ಬವನ್ನು ಹಿಂದೂ- ಮುಸ್ಲಿಂರು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಸಿಪಿಐ ಸುನೀಲ್ ಸವದಿ ಹೇಳಿದರು.
ಬುಧವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಮೊಹರಂ ಹಬ್ಬದ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹುನಗುಂದ ಪಟ್ಟಣ ಸೌಹಾರ್ದತೆಗೆ ಹೆಸರಾವಾಸಿ. ಕೋಮು ಮನೋಭಾವನೆ ತೋರುವ ಮತ್ತು ವೈಯಕ್ತಿಕ ಜಗಳವನ್ನು ಮೊಹರಂ ಹಬ್ಬದಲ್ಲಿ ತಂದು ಗಲಭೆ ಸೃಷ್ಠಿಸುವರ ಮೇಲೇ ನಿರ್ಧಾಕ್ಷಿಣ್ಯ ಕ್ರಮ ಕೈಕೊಳ್ಳಲಾಗುವುದು. ಹಬ್ಬದ ಸಂದರ್ಭದಲ್ಲಿ ಧರ್ಮ ಮತ್ತು ಜಾತಿ ಜಾತಿಗಳ ಮಧ್ಯ ಕಂದಕ ಸೃಷ್ಟಿಸುವ ಪೋಸ್ಟಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವರು ಮೇಲೂ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಮುಖಂಡ ಮಹಾಂತೇಶ ಹಳ್ಳೂರು ಮಾತನಾಡಿ, ನಮ್ಮಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಸಹೋದರರಂತೆ ಅಣ್ಣ ತಮ್ಮರಂತೆ ಬಹಳಷ್ಟು ಆತ್ಮೀಯ ಬಾಂಧವ್ಯದಿಂದ ಮೊಹರಂ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ. ಮೊಹರಂ ಕೊನೆಯ ದಿನದಂದು ಮೆರವಣೆಗೆ ಸಂದರ್ಭದಲ್ಲಿ ಪೊಲೀಸರ ಸಹಕಾರ ಬಹಳ ಅವಶ್ಯ ಎಂದರು.
ಶಿವಾನಂದ ಕಂಠಿ, ಅಪ್ಪು ಆಲೂರ, ಮಹಾಂತೇಶ ಚಿತ್ತವಾಡಗಿ ಮಾತನಾಡಿದರು. ಪಿಎಸ್ಐ ಪ್ರಕಾಶ ಡಿ, ಎನ್. ಬಿ.ಮಹಾರಾಜನವರ, ಪುರಸಭೆ ಸದಸ್ಯ ಚಂದ್ರು ತಳವಾರ, ರಾಮನಗೌಡ ಬೆಳ್ಳಿಹಾಳ, ಮುನ್ನಾ ಬಾಗವಾನ, ಶಾಂತಪ್ಪ ಮಸ್ಕಿ, ಅಬ್ದುಲ್ ರಜಾಕ್ ರೇಶ್ಮಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.