ADVERTISEMENT

ಇಳಕಲ್‌| ರಾಣಿ ಚನ್ನಮ್ಮ ಸ್ವಾಭಿಮಾನ, ಧೈರ್ಯದ ಪ್ರತೀಕ- ಶಾಸಕ ವಿಜಯಾನಂದ ಕಾಶಪ್ಪ

ವಿವಿಧೆಡೆ ಕಿತ್ತೂರು ವೀರರಾಣಿ ಚನ್ನಮ್ಮ ಜಯಂತ್ಯುತ್ಸವ: ಕಲಾತಂಡಗಳೊಂದಿಗೆ ಭಾವಚಿತ್ರದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 13:30 IST
Last Updated 25 ಅಕ್ಟೋಬರ್ 2023, 13:30 IST
ಇಳಕಲ್‌ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಕಿತ್ತೂರ ರಾಣಿ ಚನ್ನಮ್ಮನವರ ಜಯಂತ್ಯುತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪವನರ ಮಾತನಾಡಿದರು
ಇಳಕಲ್‌ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಕಿತ್ತೂರ ರಾಣಿ ಚನ್ನಮ್ಮನವರ ಜಯಂತ್ಯುತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪವನರ ಮಾತನಾಡಿದರು   

ಇಳಕಲ್‌ : ʼಬ್ರಿಟಿಷ್‌ರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಎಲ್ಲ ಮಹನೀಯರು ಗೌರವಾರ್ಹರು. ಕಿತ್ತೂರು ರಾಣಿ ಚನ್ನಮ್ಮನವರು ಸ್ವಾಭಿಮಾನ, ಸ್ವಾತಂತ್ರ್ಯದ ರಕ್ಷಣೆಗಾಗಿ ದಿಟ್ಟತದಿಂದ ಹೋರಾಡಿದರುʼ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಅವರು ಇಲ್ಲಿಯ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಕೀಯರ ಆಡಳಿತದ ವಿರುದ್ಧ ಸಿಡಿದೆದ್ದು ಭಾರತೀಯರಲ್ಲಿ ಹೋರಾಟದ ಬೀಜ ಬಿತ್ತಿದ ಚನ್ನಮ್ಮನವರ ಇತಿಹಾಸವನ್ನು ವಿಸ್ತ್ರೃತವಾಗಿ ಪಠ್ಯದಲ್ಲಿ ಸೇರಿಸಬೇಕುʼ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ನಿಂಗಪ್ಪ ಬಿರಾದಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಂತಕುಮಾರ ಸುರಪುರ, ಶರಣಪ್ಪ ಆಮದಿಹಾಳ, ಮಹಾಂತಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಇಓ ಮುರಳಿಧರ ದೇಶಪಾಂಡೆ, ಬಿಇಓ ಜಾಸ್ಮೀನ್‌ ಕಿಲ್ಲೇದಾರ ಇತರರು ಇದ್ದರು.

ADVERTISEMENT

ಶಾಸಕ ವಿಜಯಾನಂದ ಕಾಶಪ್ಪನವರ ಗೃಹ ಕಚೇರಿಯಲ್ಲಿ ಕಾಂಗ್ರೆಸ್‌ ವತಿಯಿಂದ ಜಯಂತಿ ಆಚರಿಸಲಾಯಿತು. ಕೆಪಿಸಿಸಿ ಸದಸ್ಯ ಶಾಂತಕುಮಾರ ಸುರಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣಪ್ಪ ಆಮದಿಹಾಳ, ಹಿಂದುಳಿದ ವಿಭಾಗದ ಅಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ, ಶಿವಾನಂದ ಮುಚಖಂಡಿ, ಶಿವಾನಂದ ಕಡಪಟ್ಟಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾಂತೇಶ ಪಾಟೀಲ, ಸಿ.ಪಿ.ರಾಮಗಿರಿಮಠ ಮುಂತಾದವರು ಇದ್ದರು.

‘ಚನ್ನಮ್ಮ ಸ್ತ್ರೀಕುಲದ ರತ್ನ’

ಜಮಖಂಡಿ: ಬ್ರಿಟಿಷರ ವಿರುದ್ಧ ಹೋರಾಡಿ ಶೌರ್ಯ ಮೆರೆದ ಸ್ತ್ರೀರತ್ನ ಕಿತ್ತೂರು ರಾಣಿ ಚೆನ್ನಮ್ಮ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ತಾಲ್ಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ಸೋಮವಾರ ತಾಲ್ಲೂಕುಡಳಿತ ಆಶ್ರಯದಲ್ಲಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಏಗಪ್ಪ ಸವದಿ ಮಾತನಾಡಿದರು. ಚನ್ನಮ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಸಕಲ ವಾದ್ಯಮೇಳಗಳೊಂದಿಗೆ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಇಟ್ಟಿ, ತಹಶೀಲ್ದಾರ್‌ ಸದಾಶಿವ ಮಕ್ಕೋಜಿ ಮಾತನಾಡಿದರು.

ಸರ್ವಮಂಗಳ ಉಪನ್ಯಾಸ ನೀಡಿದರು, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಜಿ.ಬಿ.ಕೌಜಲಗಿ, ಸುಭಾಷ್ ಕೊಪ್ಪದ, ಗುರುಪಾದ ಚಿನ್ನಮಲ್ಲ, ಸಿದ್ದು ಬಿಳ್ಳೂರ, ವಿಜಯಲಕ್ಷ್ಮಿ ಉಕುಮನಾಳ ಇದ್ದರು.

ಇಳಕಲ್‌ನಲ್ಲಿ ಕಾಂಗ್ರೆಸ್‌ ಪಕ್ಷದಿಂದ ನಡೆದ ಕಿತ್ತೂರ ರಾಣಿ ಚನ್ನಮ್ಮನವರ ಜಯಂತ್ಯುತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪವನರ ಚನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.