ರಬಕವಿ ಬನಹಟ್ಟಿ: ವೃತ್ತಿಯಲ್ಲಿ ಮಹಿಳಾ ಕಾನ್‌ಸ್ಟೇಬಲ್ ಹುದ್ದೆಯಲ್ಲಿದ್ದರೂ ಕುಲಕಸುಬನ್ನು ಹವ್ಯಾಸವಾಗಿ ಉಳಿಸಿಕೊಂಡಿರುವ ಹೊಸೂರಿನ ಲಕ್ಷ್ಮಿ ಕುಂಬಾರ ಅವರು ನಗರದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಮಣ್ಣಿನ ಎತ್ತುಗಳನ್ನು ತಯಾರಿಸುವುದು ಜನರ ಗಮನ ಸೆಳೆಯಿತು.
ಜಮಖಂಡಿಯ ಟೌನ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೇಬಲ್ ಹುದ್ದೆಯಲ್ಲಿ 2028ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ತಮ್ಮ ಮನೆತನದ ಮೂಲ ಕಸಬನ್ನು ಮಾತ್ರ ಅವರು ಬಿಟ್ಟಿಲ್ಲ. ವೃತ್ತಿಯ ಜೊತೆಗೆ ಕಾರು ಹುಣ್ಣಿಮೆಯ ಸಂದರ್ಭದಲ್ಲಿ ಎತ್ತುಗಳನ್ನು, ಗುಳ್ಳವ್ವನನ್ನು ಮಾಡುವುದು ನಂತರ ಮಣ್ಣಿನ ಒಲೆ ಹಾಗೂ ಗಡಿಗೆಗಳನ್ನು ತಯಾರಿಸುವಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ನೆರವಾಗುತ್ತಾರೆ.
’ನಾವು ಮೊದಲು ನಮ್ಮ ಮನೆತನದ ಮೂಲ ಕಸುಬನ್ನು ಮುಂದುವರೆಸಿಕೊಂಡು ಬರಬೇಕು. ನಂತರ ನಮ್ಮ ಮಕ್ಕಳು ಕೂಡಾ ಅದನ್ನು ಮನ್ನಡೆಸುತ್ತಾರೆ. ನಾವು ಯಾವುದೇ ರೀತಿಯ ಸಂಕೋಚ ಪಡಬಾರದು. ದೇಶದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿಕೊಂಡು ಹೋಗುವುದು ಕೂಡಾ ಮುಖ್ಯ‘ ಎನ್ನುತ್ತಾರೆ ಲಕ್ಷ್ಮಿ ಕುಂಬಾರ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.