ADVERTISEMENT

ಬಾಗಲಕೋಟೆ: ಸತತ ಮಳೆ, ಬೆಳೆ ಹಾಳಾಗುವ ಆತಂಕ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 4:52 IST
Last Updated 10 ಆಗಸ್ಟ್ 2025, 4:52 IST
ಇಳಕಲ್ ನಲ್ಲಿ ಸುರಿದ ಮಳೆಯಿಂದ ಗೊರಬಾಳ ಹತ್ತಿರದ ಹೆದ್ದಾರಿ ಅಂಡರ್ ಪಾಸ್ ನಲ್ಲಿ ಮಳೆ ನೀರು ತುಂಬಿಕೊಂಡಿದೆ.
ಇಳಕಲ್ ನಲ್ಲಿ ಸುರಿದ ಮಳೆಯಿಂದ ಗೊರಬಾಳ ಹತ್ತಿರದ ಹೆದ್ದಾರಿ ಅಂಡರ್ ಪಾಸ್ ನಲ್ಲಿ ಮಳೆ ನೀರು ತುಂಬಿಕೊಂಡಿದೆ.   

ಇಳಕಲ್: ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಶನಿವಾರ ಸಂಜೆ ಬಿರುಸಿನಿಂದ ಮಳೆ ಸುರಿಯಿತು.

ಬುಧವಾರದಿಂದ ಮಳೆ ಪ್ರತಿದಿನ ಸಂಜೆ ಅಥವಾ ರಾತ್ರಿ ಹೊತ್ತು ಸುರಿಯುತ್ತಿದೆ. ರೈತರಿಗೆ ಅತಿವೃಷ್ಟಿಯ ಭಯ ಕಾಡುತ್ತಿದೆ. ನಗರದ ಹಿರೇಹಳ್ಳ, ಎರೀಹಳ್ಳ ಸೇರಿದಂತೆ ತಾಲ್ಲೂಕಿನಾದ್ಯಂತ ಹಳ್ಳಗಳು ತುಂಬಿ ಹರಿಯುತ್ತಿವೆ. ಹೊಲದ ಒಡ್ಡುಗಳಲ್ಲಿ ನೀರು ತುಂಬಿ, ಬೆಳೆ ನಷ್ಠವೂ ಆಗಿದೆ.

ಮಳೆ ಹೆಚ್ಚಾಗಿದ್ದರಿಂದ ಕೆಲವೆಡೆ ತೊಗರಿ ಬೆಳೆ ಹಳದಿಯಾಗುತ್ತಿವೆ. ಹೂ ಬಿಟ್ಟಿರುವ ಸೂರ್ಯಕಾಂತಿಯಲ್ಲಿ ಪರಾಗ ನಷ್ಟದಿಂದ ಕಾಳು ಸರಿಯಾಗಿ ಕಟ್ಟಲಿಕ್ಕಿಲ್ಲ ಎನ್ನುವ ಆತಂಕ ಉಂಟಾಗಿದೆ. ಹೆಸರು ಬೆಳೆಯ ಫಸಲು ಬಂದಿದ್ದು, ಬುಡ್ಡಿ ಬಿಡಿಸಿ, ರಾಶಿ ಮಾಡಲು ಮಳೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಇಡೀ ದಿನ ಮೋಡ ಮುಸುಗಿದ ವಾತಾವರಣ ಇರುವುದರಿಂದ ಕೀಟಬಾಧೆ ಹೆಚ್ಚುವ ಆತಂಕ ಕಾಡುತ್ತಿದೆ ಎಂದು ರೈತರು ಹೇಳುತ್ತಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.