ADVERTISEMENT

ಕೊಲೆ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 16:07 IST
Last Updated 3 ಜುಲೈ 2025, 16:07 IST

ಕೆರೂರ: ಕೊಲೆ ಮಾಡಿದ ಅಪರಾಧಿಗೆ ಬಾಗಲಕೋಟೆ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡಿ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಸಮೀಪದ ಹಂಗರಗಿ ಗ್ರಾಮದ ಹೊಳಿಯಪ್ಪ ಗಾಣಿಗೇರ ಕೊಲೆಯಾದ ವ್ಯಕ್ತಿ. ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಹನಮಂತ ಗಾಣಿಗೇರ ಇಬ್ಬರು ಕೊಲೆ ಮಾಡಿದ ಅಪರಾಧಿಗಳು.

ಘಟನೆಯ ವಿವರ: ಮೃತ ಹೊಳಿಯಪ್ಪ ಗಾಣಿಗೇರ ಅಪರಾಧಿ  ಮಲ್ಲಿಕಾರ್ಜುನ ಗಾಣಿಗೇರ ಮಗಳ ಜೊತೆಗೆ ಸಲುಗೆಯಿಂದ ಮಾತನಾಡುವುದು ಮತ್ತು ಹುಡುಗಾಟ ಮಾಡುವುದು ಮಾಡುತ್ತಿದ್ದರಿಂದ ಮಲ್ಲಿಕಾರ್ಜುನ ಸಿಟ್ಟಾಗಿ ಕೊಲೆ ಮಾಡಬೇಕೆಂದು ನಿರ್ಧರಿಸಿದ್ದನು.

ADVERTISEMENT

2020ರಲ್ಲಿ ಹೊಸ ವರ್ಷಾಚರಣೆ ಮಾಡುವ ನೆಪದಲ್ಲಿ ಮಲ್ಲಿಕಾರ್ಜುನ ತನ್ನ ಸಹಚರ ಹನಮಂತ ಗಾಣಿಗೇರನೊಂದಿಗೆ ಮೃತ ಹೊಳಿಯಪ್ಪನನ್ನು ಕರೆದುಕೊಂಡು ಹೊಲಕ್ಕೆ ಹೋಗಿದ್ದನು. ಪಾರ್ಟಿ ಮಾಡಿ, ಮಧ್ಯರಾತ್ರಿ ಹೊಳಿಯಪ್ಪನ ತಲೆಗೆ ಸ್ಪ್ರಿಂಕ್ಲರ್‌ ಗಡ್ಡಿಯಿಂದ ಹೊಡೆದು, ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿತ್ತು.

ಜೀವಾವಧಿ ಶಿಕ್ಷೆಯ ಜೊತೆಗೆ ಅಪರಾಧಿಗಳಿಗೆ ತಲಾ ₹5 ಸಾವಿರ, ದೂರುದಾರರಾದ ಮೃತರ ಪತ್ನಿಗೆ ₹3 ಲಕ್ಷ ಪರಿಹಾರ ನೀಡಲು ನ್ಯಾಯಾಧೀಶ ಎನ್‌.ವಿ. ವಿಜಯ ಆದೇಶಿಸಿದ್ದಾರೆ. ಸರ್ಕಾರದ‌ ಪರವಾಗಿ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.