ಕುಳಗೇರಿ ಕ್ರಾಸ್: ಬಾದಾಮಿ ತಾಲ್ಲೂಕಿನ ಗಡಿಗ್ರಾಮ ಗೋವನಕೊಪ್ಪ ಗ್ರಾಮದ ಮಲಪ್ರಭಾ ಹಳೇ ಸೇತುವೆಗೆ ಗುರುವಾರ ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ನೀಡಿ ಹಾನಿಯಾದ ಬೆಳೆಗಳ ವೀಕ್ಷಿಸಿದರು.
ಮಲಪ್ರಭಾ ನದಿ ಒತ್ತುವರಿ ಮಾಡಿದ್ದರಿಂದ ರೈತರ ಜಮೀನುಗಳಿಗೆ ಹಾಗೂ ಗ್ರಾಮಗಳಿಗೆ ನೀರು ನುಗ್ಗಿ ಹಾನಿಯಾಗುತ್ತಿದೆ. ಗೋವನಕೊಪ್ಪ ಗ್ರಾಮದ ರೈತ ಸಮೂಹ ಒತ್ತುವರಿ ತೆರವಿಗೆ ನಮ್ಮ ಸಹಕಾರವಿದೆ ಎಂದು ಗೋವನಕೊಪ್ಪ ಗ್ರಾಮದ ರೈತ ಹನುಮಂತಗೌಡ ಪಾಟೀಲ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮುದಕಣ್ಣ ಹೆರಕಲ್ ಜಿಲ್ಲಾಧಿಕಾರಿಗೆ ತಿಳಿಸಿದರು.
ಮಲಪ್ರಭಾ ನದಿ ಪಾತ್ರದ ರೈತರುಒಪ್ಪಿದರೆ ಒತ್ತುವರಿ ತೆರವುಗೊಳಿಸಿ ಮಳೆಗಾಲದ ನಂತರ ಮಲಪ್ರಭಾ ನದಿ ಒತ್ತುವರಿ ಸರ್ವೆ ಕೈಗೊಳ್ಳುವಂತೆ ಬಾದಾಮಿ ತಹಶೀಲ್ದಾರ್ ಕಾವ್ಯಾಶ್ರೀ ಎಚ್ ಅವರಿಗೆ ಜಿಲ್ಲಾಧಿಕಾರಿ ತಿಳಿಸಿದರು.
ಮಲಪ್ರಭಾ ನದಿ ಪ್ರವಾಹದಿಂದ ಹಾಗೂ ಸತತ ಮಳೆ ಸುರಿದು ಹಾನಿಯಾದ ಬೆಳೆಗಳ ಪ್ರಾಥಮಿಕ ವರದಿಯನ್ನು ತಯಾರಿಸಿ ಕಂದಾಯ ಇಲಾಖೆಯ ಪೋರ್ಟಲ್‌ನಲ್ಲಿ ಮಾಹಿತಿ ಹಾಕಬೇಕು, ಹಾನಿಯಾದ ವರದಿ ಕೂಡಲೇ ನೀಡುವಂತೆ ಸಹಾಯಕ ಕೃಷಿ ನಿರ್ದೆಶಕ ಅಶೋಕ ತಿರಕನ್ನವರ ಹಾಗೂ ಹಿರಿಯ ತೋಟಗಾರಿಕಾ ನಿರ್ದೆಶಕ ಬಾಳನಗೌಡ ಪಾಟೀಲಗೆ ಸೂಚಿಸಿದರು.
ಉಪ ತಹಶೀಲ್ದಾರ್ ಮೋಮಿನ್, ಎ.ಡಿ ಅಶೋಕ ತಿರಕನ್ನವರ, ಹಿರಿಯ ತೋಟಗಾರಿಕಾ ನಿರ್ದೆಶಕ ಬಾಳನ ಗೌಡ ಪಾಟೀಲ, ಕೃಷಿ ಅಧಿಕಾರಿ ಪರಶುರಾಮ ಗಣಿ, ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ, ಗ್ರಾಮ ಆಡಳಿತಾಧಿಕಾರಿ ಬಿ.ಎಂ.ಹಳ್ಳೂರ, ಲಕ್ಷ್ಮಣ ತಳವಾರ ಹಾಗೂ ಗ್ರಾಮ ಸಹಾಯಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.