ADVERTISEMENT

ಮಹಾಲಿಂಗಪುರ | ಅಮೋಘಸಿದ್ಧೇಶ್ವರ ಜಾತ್ರೆ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:12 IST
Last Updated 16 ಏಪ್ರಿಲ್ 2025, 16:12 IST

ಮಹಾಲಿಂಗಪುರ: ಸಮೀಪದ ನಾಗರಾಳ ಗ್ರಾಮದ ಅಮೋಘಸಿದ್ಧೇಶ್ವರ ಜಾತ್ರೆ ಏ.17 ರಿಂದ 21 ರವರೆಗೆ ನಡೆಯಲಿದೆ.

ಏ.17ರಂದು ಜಟೋತ್ಸವ, ಸತ್ಯ ಸಿದ್ಧರ ಭೇಟಿ, ವಾಲಗ, ಪಲ್ಲಕ್ಕಿ ಉತ್ಸವ, ಸಹಸ್ರ ದೀಪೋತ್ಸವ, ಏ.18 ರಂದು ಅಮೋಘಸಿದ್ಧೇಶ್ವರ ಅಭಿಷೇಕ, ಗ್ರಾಮ ದೇವಿಯ ಉಡಿ ತುಂಬುವುದು ನಂತರ ಮಹಾರಥೋತ್ಸವ, ಏ.19 ರಂದು ಜಂಗಿ ನಿಕಾಲಿ ಕುಸ್ತಿ, ಟ್ರ್ಯಾಕ್ಟರ್ ಟ್ರೇಲರ್ ಲೋಡ್ ಜಗ್ಗುವ ಸ್ಪರ್ಧೆ, ಏ.20 ರಂದು ತೆರಬಂಡಿ ಸ್ಪರ್ಧೆ, ಏ.21 ರಂದು ಅಮೋಘಸಿದ್ಧೇಶ್ವರ ಪಲ್ಲಕ್ಕಿಯು ಭಂಡಾರದ ಉತ್ಸವದೊಂದಿಗೆ ಗದ್ದುಗೆಗೊಂಡು ಜಾತ್ರೆ ಸಮಾರೋಪಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT