ADVERTISEMENT

ಪರಿಷ್ಕೃತ ವೇತನ ಶ್ರೇಣಿಯ ನಿವೃತ್ತಿ ಸೌಲಭ್ಯ ಒದಗಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 15:52 IST
Last Updated 21 ಆಗಸ್ಟ್ 2024, 15:52 IST
ಹುನಗುಂದ: ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಪಾರಸ್ಸುಗಳ ಅನುಷ್ಠಾನ ಮಾಡಿದ್ದು, ಅದರಲ್ಲಿ ಪಿಂಚಣಿದಾರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಗ್ರೇಡ್ 2 ತಹಶೀಲ್ದಾರ್ ಮಹೇಶ ಸಂದಿಗೌಡ ಅವರಿಗೆ ಮನವಿ ಸಲ್ಲಿಸಿದರು
ಹುನಗುಂದ: ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಪಾರಸ್ಸುಗಳ ಅನುಷ್ಠಾನ ಮಾಡಿದ್ದು, ಅದರಲ್ಲಿ ಪಿಂಚಣಿದಾರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಗ್ರೇಡ್ 2 ತಹಶೀಲ್ದಾರ್ ಮಹೇಶ ಸಂದಿಗೌಡ ಅವರಿಗೆ ಮನವಿ ಸಲ್ಲಿಸಿದರು   

ಹುನಗುಂದ: ರಾಜ್ಯ ಸರ್ಕಾರ ಈಚೆಗೆ ತನ್ನ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ ಮಾಡಿದ್ದು, ಅದರಲ್ಲಿ ಪಿಂಚಣಿದಾರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯವನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಗ್ರೇಡ್ 2 ತಹಶೀಲ್ದಾರ್ ಮಹೇಶ ಸಂದಿಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ನಿವೃತ್ತ ನೌಕರ ಎ.ಆರ್. ನಡುವಿನಮನಿ ಮಾತನಾಡಿ, ‘ರಾಜ್ಯ ಸರ್ಕಾರ ಈಗಾಗಲೇ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿದ್ದು, 2022 ಜುಲೈ 1 ರಿಂದ 2024 ಜುಲೈ 31 ರ (25 ತಿಂಗಳ) ಅವಧಿಯಲ್ಲಿ ಸೇವೆಯಿಂದ ನಿವೃತ್ತರಾಗಿರುವ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡು ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕಹಾಕುವ ಉದ್ದೇಶಗಳಿಗೆ ಪರಿಗಣಿಸತಕ್ಕದ್ದು. ಈ 25 ತಿಂಗಳ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಪರಿಷ್ಕೃತ ವೇತನದ ಅನ್ವಯ ಸರಿಯಾಗಿ ಲೆಕ್ಕಚಾರ ಮಾಡದೇ ಹಳೆಯ ವೇತನ ಪರಿಗಣಿಸುತ್ತಿರುವುದು ನಮಗೆ ಅತೀವ ಬೇಸರವಾಗಿದೆ. 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯ ಪಡೆಯುವ ಅರ್ಹತೆ ಹೊಂದಿದ್ದು ನಮಗೂ ಸೌಲಭ್ಯ ಒದಗಿಸಿಕೊಡಬೇಕು’ ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ಮಹಾಂತೇಶ ಗಂಜೀಹಾಳ, ಸಿದ್ಧಲಿಂಗಪ್ಪ ಬೀಳಗಿ, ಮಡಿವಾಳಪ್ಪ ವಾಲೀಕಾರ, ಬಿ.ಆರ್. ಮಸ್ಕಿ, ವೀರಪ್ಪ ವಾಲಿ, ಈರಯ್ಯ ಹಿರೇಮಠ, ಬಸವರಾಜ ಕರದಾನಿ, ಶಂಕರಗೌಡ ಪಾಟೀಲ, ರಾಯನಗೌಡ ಪಾಟೀಲ, ಎಸ್.ಬಿ.ಪೂಜಾರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.