ADVERTISEMENT

ಬಾಗಲಕೋಟೆ | ಕಲಿಕೋಪಕರಣಗಳಿಂದ ಪರಿಣಾಮಕಾರಿ ಕಲಿಕೆ–ಅಜಿತ್ ಮನ್ನಿಕೇರಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 8:08 IST
Last Updated 31 ಜನವರಿ 2026, 8:08 IST
ಬಾಗಲಕೋಟೆಯ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.7ರಲ್ಲಿ ಶುಕ್ರವಾರ ಮಕ್ಕಳ ಕಲಿಕಾ ಪ್ರದರ್ಶನವನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಉದ್ಘಾಟಿಸಿದರು
ಬಾಗಲಕೋಟೆಯ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.7ರಲ್ಲಿ ಶುಕ್ರವಾರ ಮಕ್ಕಳ ಕಲಿಕಾ ಪ್ರದರ್ಶನವನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಉದ್ಘಾಟಿಸಿದರು   

ಬಾಗಲಕೋಟೆ: ಕಲಿಕೋಪಕರಣಗಳಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿ ಆಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಹೇಳಿದರು.

ನವನಗರದ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.7ರಲ್ಲಿ ಶುಕ್ರವಾರ ಮಕ್ಕಳ ಕಲಿಕಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಒಳ್ಳೆಯ ಆಹಾರ, ಶುದ್ಧ ಕುಡಿಯುವ ನೀರು ಒದಗಿಸುವಂತೆ ಸಲಹೆ ನೀಡಿದರು.

ಪ್ರಮೋದಿನಿ ಬಳೋಲಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಮಖಂಡಿ ಬಿಇಒ ಎ.ಕೆ. ಬಸಣ್ಣವರ, ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಪಿ.ನಾಗರಾಜ, ವೈ.ಡಿ. ಕಿರಸೂರ, ಎಚ್.ಡಿ. ಕೊಡ್ಡಣ್ಣವರ, ಹುಚ್ಚೆಶ ಲಾಯದಗುಂದಿ, ಎಂ.ಎ. ಸೌದಾಗರ, ಲಕ್ಷ್ಮಣ ಯಂಕಂಚಿ, ಡಿ.ಬಿ. ಕೆರೂರ, ಐ.ಡಿ. ಅತ್ತಾರ, ವಿರುಪಾಕ್ಷ ಹಾದಿಮನಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.