ADVERTISEMENT

ಕಾನೂನನ್ನು ಎಲ್ಲರೂ ಗೌರವಿಸಿ: ನ್ಯಾಯಾಧೀಶ ಹರೀಶ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:52 IST
Last Updated 1 ಜುಲೈ 2025, 13:52 IST
ಬಾಗಲಕೋಟೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು  ಕಾನೂನು ಸೇವೆಗಳ ಸಮಿತಿ,  ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು  ಇವರ ಆಶ್ರಯದಲ್ಲಿ ಕಾನೂನು ಅರಿವು-ನೆರವ ಕಾರ್ಯಕ್ರಮ ಉದ್ಘಾಟಿಸಿ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಹರೀಶ್ ಜಾಧವ ಮಾತನಾಡಿದರು 
ಬಾಗಲಕೋಟೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು  ಕಾನೂನು ಸೇವೆಗಳ ಸಮಿತಿ,  ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು  ಇವರ ಆಶ್ರಯದಲ್ಲಿ ಕಾನೂನು ಅರಿವು-ನೆರವ ಕಾರ್ಯಕ್ರಮ ಉದ್ಘಾಟಿಸಿ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಹರೀಶ್ ಜಾಧವ ಮಾತನಾಡಿದರು    

ಗುಳೇದಗುಡ್ಡ: ಇಂದಿನ ಬಾಲಕರು ನಾಳಿನ ನಾಗರಿಕರಾಗಿ ದೇಶ ಸೇವೆ ಮಾಡುವವರು ಎಲ್ಲ ವಿದ್ಯಾರ್ಥಿಗಳು ಕಾನೂನು ಹಾಗೂ ಕಾನೂನು ಸೇವೆಗಳ ಮಾಹಿತಿಯನ್ನು ತಿಳಿದುಕೊಂಡು ಜನರಲ್ಲಿ ಅರಿವು ಮೂಡಿಸಬೇಕು. ಕಾನೂನನ್ನು ಎಲ್ಲರೂ ಗೌರವಿಸುವ ಮೂಲಕ ಉತ್ತಮ ನಾಗರಿಕರಾಗಬೇಕೆಂದು ಬಾಗಲಕೋಟೆ ಜೆ.ಎಂ.ಎಫ್.ಸಿ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಹರೀಶ್ ಜಾಧವ ಹೇಳಿದರು.

ಅವರು ಮಂಗಳವಾರ ಬಾಗಲಕೋಟೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಆಶ್ರಯದಲ್ಲಿ ಕಾನೂನು ಅರಿವು-ನೆರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗದೆ ದೂರವಿದ್ದು, ದೇಶ ಕಟ್ಟುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ವಕೀಲೆ ಪೂಜಾ ಬಾರಾಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನ್ಯಾಯಿಕ ವ್ಯವಸ್ಥೆಯ ಮೂಲಕ ನಾಗರಿಕರಿಗೆ ನೀಡುವ ಕಾನೂನು ಸೇವೆಗಳ ಮಾಹಿತಿ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಇವುಗಳನ್ನು ಅರಿತುಕೊಂಡು ಸಾಂದರ್ಭಿಕವಾಗಿ ಬಳಸಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ಕಾನೂನಿನ ತಿಳುವಳಿಕೆ ತುಂಬಾ ಅಗತ್ಯವಾಗಿದೆ ಎಂದರು.

ಪ್ರಾಚಾರ್ಯ ವಿಠ್ಠಲ ಕಳಸಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಈಗಿನಿಂದಲೇ ಕಾನೂನು ಅಧ್ಯಯನ ಮಾಡುವ ಮೂಲಕ ತಿಳಿದುಕೊಂಡು ಕಾನೂನನ್ನು ಗೌರವಿಸಿದರೆ ದೇಶದ ಉತ್ತಮ ಪೌರರಾಗಲು ಸಾಧ್ಯ ಎಂದರು.

ಉಪನ್ಯಾಸಕರಾದ ಡಿ.ವೈ.ಗೌಡರ, ಈರಣ್ಣ ದೊಡಮನಿ, ಸುಷ್ಮಾ ಅಡಕಿ, ಎಸ್.ಎಚ್.ಮಡಿವಾಳರ, ಎಚ್.ವೈ.ಕುಂದರಗಿ, ಜೆ.ವಿ.ಯಡವನ್ನವರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.