ಗುಳೇದಗುಡ್ಡ: ಪಟ್ಟಣದ ಗಾಂಧಿ ಸ್ಮಾರಕ ಭವನದ ಆವರಣವನ್ನು ಪುರಸಭೆ ಕಾರ್ಮಿಕರು ಬುಧವಾರ ಬೆಳಗ್ಗೆಯಿಂದ ಸ್ವಚ್ಚತಾ ಕಾರ್ಯವನ್ನು ಆರಂಭಿಸಿದ್ದಾರೆ.
ಬುಧವಾರ ‘ಶೌಚಾಲಯವಾದ ಗಾಂಧಿ ಸ್ಮಾರಕ ಭವನ’ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಯ ಪರಿಣಾಮವಾಗಿ ಸ್ವಚ್ಛತಾ ಕಾರ್ಯ ಮತ್ತು ಅಲ್ಲಿ ಮಲಮೂತ್ರ ವಿಸರ್ಜನೆಗೆ ಬರುವ ಜನರಿಗೆ ತಾಕೀತು ಮಾಡುವ ಮೂಲಕ ಕಡಿವಾಣ ಹಾಕಲಾಯಿತು.
ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ ಮಾತನಾಡಿ, ‘ಬುಧವಾರದಿಂದಲೇ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಅಲ್ಲಿ ಇನ್ನು ಮುಂದೆ ಯಾವುದೇ ಅವ್ಯವಸ್ಥೆ ಹಾಗೂ ಅನೈತಿಕ ಚಟುವಟಿಕೆ ತಾಣವಾಗದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ಸುತ್ತಮುತ್ತಲಿನ ಜನರಿಗೆ ತಿಳಿಸಿ ಹೇಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.