ADVERTISEMENT

ಅಮೀನಗಡ | ಆರೋಗ್ಯ ತಪಾಸಣಾ ಶಿಬಿರ ಆ.1ರಂದು

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 2:40 IST
Last Updated 30 ಜುಲೈ 2025, 2:40 IST
ಶಂಕರರಾಜೇಂದ್ರ ಸ್ವಾಮೀಜಿ, ಪ್ರಭುಶಂಕರೇಶ್ವರ ಗಚ್ಚಿನಮಠ, ಅಮೀನಗಡ
ಶಂಕರರಾಜೇಂದ್ರ ಸ್ವಾಮೀಜಿ, ಪ್ರಭುಶಂಕರೇಶ್ವರ ಗಚ್ಚಿನಮಠ, ಅಮೀನಗಡ   

ಅಮೀನಗಡ: ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಪ್ರಭುಶಂಕರೇಶ್ವರ ಗಚ್ಚಿನಮಠದ ಪೀಠಾಧಿಪತಿ ಶಂಕರರಾಜೇಂದ್ರ ಸ್ವಾಮೀಜಿ 52ನೇ ಜನ್ಮದಿನದ ಅಂಗವಾಗಿ ಆಗಸ್ಟ್ 1ರಂದು ವಿದ್ಯಾವರ್ಧಕ ಸಂಘದ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಹಾಗೂ ಔಷಧ ವಿತರಣೆ ನಡೆಯಲಿದೆ.

‘ಅಕ್ಕನ ಬಳಗ, ಪ್ರಭುಶಂಕರೇಶ್ವರ ಸಾಂಸ್ಕೃತಿಕ ವೇದಿಕೆ, ಎಸ್ .ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಸಹಯೋಗದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಿಬಿರ ನಡೆಯಲಿದೆ’ ಎಂದು ಸಂಘದ ಚೇರ್ಮನ್ ಐ.ಎಸ್. ಲಿಂಗದಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT