ADVERTISEMENT

ಹಿಪ್ಪರಗಿ ಜಲಾಶಯ: 97,000 ಕ್ಯೂಸೆಕ್‍ ಒಳ ಹರಿವು

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 17:15 IST
Last Updated 18 ಜೂನ್ 2021, 17:15 IST
ರಬಕವಿ ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದಿಂದ ಅಪಾರ ಪ್ರಮಾಣದ ನೀರುನ್ನು ಹೊರಗೆ ಬಿಡಲಾಗುತ್ತಿದೆ
ರಬಕವಿ ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದಿಂದ ಅಪಾರ ಪ್ರಮಾಣದ ನೀರುನ್ನು ಹೊರಗೆ ಬಿಡಲಾಗುತ್ತಿದೆ   

ರಬಕವಿ ಬನಹಟ್ಟಿ: ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಸಮೀಪದಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ಶುಕ್ರವಾರ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ 97,000 ಕ್ಯೂಸೆಕ್‍ ನೀರು ಬಂದಿದೆ ಎಂದು ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಕೆ.ಜಾಲಿಬೇರಿ ತಿಳಿಸಿದರು. ಜಲಾಶಯದ ಹೊರ ಹರಿವು 96 ಸಾವಿರ ಕ್ಯೂಸೆಕ್ ಇದ್ದು, ಜಲಾಶಯದಲ್ಲಿ ನೀರಿನ ಮಟ್ಟ 521.00 ಮೀಟರ್ ಇದ್ದು, ಜಲಾಶಯದಲ್ಲಿ 2.62 ಟಿಎಂಸಿ ನೀರಿನ ಸಂಗ್ರಹವಿದೆ.

ಮಹಾರಾಷ್ಟ್ರದ ಕೊಯ್ನಾ 142 ಮಿ.ಮೀ, ವಾರಣಾ 80 ಮಿ.ಮೀ ದೂಧಗಂಗಾ 185 ಮಿ.ಮೀ, ರಾಧಾ ನಗರಿ 220 ಮಿ.ಮೀ ಮಳೆಯಾದ ವರದಿಯಾಗಿದೆ.

ADVERTISEMENT

ಬೋಟ್ ಸೇವೆ ಬಂದ್: ಕೃಷ್ಣಾ ನದಿಯಲ್ಲಿ ನೀರಿನ ಹರಿವು ತೀವ್ರವಾಗಿರುವುದರಿಂದ ರಬಕವಿ, ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲ್ಲೂಕಿನಿಂದ ಅಥಣಿ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೇವೆ ಕಲ್ಪಿಸುತ್ತಿದ್ದ ಬೋಟ್‍ ಸೇವೆಯನ್ನು ಬಂದು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.