ಬೀಳಗಿ ತಾಲ್ಲೂಕಿನ ರಬಕವಿಯಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಮೊಸಳೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದರು
ಬೀಳಗಿ: ತಾಲ್ಲೂಕಿನ ಗಲಗಲಿ ಸಮೀಪದ ರಬಕವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ. ಕೃಷ್ಣಾ ನದಿ ನೀರಿನಮಟ್ಟ ಕಡಿಮೆ ಆಗುತ್ತಿದ್ದಂತೆ ಆಹಾರ ಅರಿಸಿ ಬಂದ ಮೊಸಳೆ, ರಬಕವಿ ಗ್ರಾಮದ ರೈತ ಸುರೇಶ ಗುಮ್ಮಡಿ ಅವರ ಜಮೀನಲ್ಲಿ ಪತ್ತೆಯಾಗಿದೆ.
ಮೊಸಳೆ ಕಂಡ ಸ್ಥಳೀಯರು ಬೆಚ್ಚಿಬಿದ್ದರು. ಸಮೀಪದ ಬಬಲಾದಿಯ ಸಿದ್ರಾಮೇಶ್ವರ ಅಜ್ಜನವರು ಸಮ್ಮುಖದಲ್ಲಿ ಮೊಸಳೆ ರಕ್ಷಣೆ ಮಾಡಿ, ಅರಣ್ಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ಗಲಗಲಿ ಬಳಿಯ ಕೃಷ್ಣಾ ನದಿಯಲ್ಲಿ ಮೊಸಳೆಯನ್ನು ಸುರಕ್ಷಿತವಾಗಿ ಬಿಡಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.