ADVERTISEMENT

ಇಳಕಲ್: ಪಾರ್ಲರ್, ಮನೆ ಬೀಗ ಒಡೆದು ಕಳ್ಳತನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:21 IST
Last Updated 26 ಜೂನ್ 2025, 15:21 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಇಳಕಲ್: ನಗರದ ಕಿಲ್ಲಾದಲ್ಲಿ ಬ್ಯೂಟಿ ಪಾರ್ಲರ್ ಹಾಗೂ ಮನೆಯೊಂದರ ಬೀಗ ಒಡದು ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಬ್ಯೂಟಿ ಪಾರ್ಲರ್‌ನಲ್ಲಿ ₹38 ಸಾವಿರ, ಮಗುವಿನ ಕಿವಿಯೊಲೆ, ಒಂದು ಉಂಗುರ ಕಳುವಾಗಿದೆ ಎಂದು ಮಾಲೀಕ ಪವನ ಪವಾರ ಹೇಳಿದರು.

ಕಿಲ್ಲಾದಲ್ಲಿಯೇ ಬೀಗ ಹಾಕಲಾಗಿದ್ದ ಮತ್ತೊಂದು ಮನೆಯ ಬೀಗ ಒಡೆದು ಕಳ್ಳತನ ಮಾಡಲಾಗಿದ್ದು ಕಳುವಾದ ವಸ್ತುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಪಿಎಸ್‌ಐ ಎಸ್.ಆರ್.ನಾಯಕ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ, ತನಿಖೆ ಕೈಗೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.