ಮಹಾಲಿಂಗಪುರ: ‘ಭಯೋತ್ಪಾದನೆಯನ್ನು ಬುಡಸಮೇತ ಕಿತ್ತು ಹಾಕಿ ಶಾಂತಿ ಸ್ಥಾಪಿಸಲು ಹೊರಟಿರುವ ಭಾರತೀಯ ಸೈನ್ಯದ ಶಕ್ತಿ ಇಂದು ಜಗತ್ತಿಗೆ ಅರಿವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಪಾಕಿಸ್ತಾನ ಮೇಲಿನ ಯೋಧರ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಸಮೀಪದ ಮದಬಾವಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
‘ಮಾತೃಭೂಮಿಯ ರಕ್ಷಣೆಗೆ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವ ಕಾರ್ಯವನ್ನು ಪ್ರತಿಯೊಬ್ಬ ಭಾರತೀಯನು ಮಾಡುತ್ತಿದ್ದಾನೆ. ಶತ್ರು ಸಂಹಾರಕ್ಕೆ ನಮ್ಮ ಸೇನಾ ಪಡೆ ಹೆಬ್ಬುಲಿಯಂತೆ ಮುನ್ನುಗ್ಗುತ್ತಿರುವುದನ್ನು ತಡೆಯುವ ಶಕ್ತಿ ಇಂದು ವಿಶ್ವದ ಯಾವ ಶಕ್ತಿಗೂ ಸಾಧ್ಯವಿಲ್ಲ’ ಎಂದರು.
ಮಹಾಲಿಂಗ ನಾಯಕ, ಅಜ್ಜಪ್ಪ ವಗ್ಗರ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.