ಜಮಖಂಡಿ: ಇಲ್ಲಿನ ದಿ.ಜಮಖಂಡಿ ಅರ್ಬನ್ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ಡಿ. 23 ರಂದು ನಡೆದಿತ್ತು, ಆದರೆ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಮತ ಎಣಿಕೆ ಮಾಡಿರಲಿಲ್ಲ. ಈಗ ನ್ಯಾಯಾಲಯದ ಆದೇಶ ಬಂದಿದ್ದು, ಫೆ. 2 ರಂದು ಬೆಳಿಗ್ಗೆ 8ಕ್ಕೆ ಪಿಬಿ ಹೈಸ್ಕೂಲ್ ನಲ್ಲಿ ಮತ ಎಣಿಕೆ ಮಾಡಲಾಗುವುದು ಎಂದು ತಹಶೀಲ್ದಾರ್ ಸದಾಶಿವ ಮಕ್ಕೋಜಿ ಹೇಳಿದರು.
ಇಲ್ಲಿನ ಅರ್ಬನ್ ಬ್ಯಾಂಕಿನ ಸಭಾಭವನದಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೋರ್ಟ್ ಆದೇಶ ತಂದು ಮತದಾನ ಮಾಡಿರುವ ಮತಗಳನ್ನು ಪರಿಗಣಿಸಲು ಆದೇಶವಿದೆ ಎಂದರು.
ಮುಂಜಾನೆ 7ಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಮತಪೆಟ್ಟಿಗೆಗಳನ್ನು ತರಲಾಗುವುದು, 25 ಬೂತ್‌ಗಳಲ್ಲಿ ಮತ ಎಣಿಕೆ ನಡೆಯುತ್ತದೆ. ಒಂದು ಬೂತ್‌ನಲ್ಲಿ 6 ಸಿಬ್ಬಂದಿ, ಒಬ್ಬರು ಪೊಲೀಸರನ್ನು ನೇಮಕ ಮಾಡಲಾಗಿದೆ. ಮತ ಎಣಿಕೆ ಮಾಡುವಾಗ ಎಜೆಂಟರಿಗೆ ತೋರಿಸಿ ಮಾಡಲಾಗುವದು. ಯಾವುದೇ ಸಮಸ್ಯೆಗಳು ಬಂದರೆ ಚುಣಾವಣಾಧಿಕಾರಿ ಪರಿಹರಿಸುತ್ತಾರೆ ಎಂದರು.
ಒಬ್ಬ ಅಭ್ಯರ್ಥಿಗೆ 5 ಎಜೆಂಟರ್ ಅನುಮತಿ ನೀಡಲಾಗುವುದು. ಯಾರು ಮತ ಎಣಿಕೆ ಸ್ಥಳದಲ್ಲಿ ಮೊಬೈಲ್ ತರಬಾರದು. ಅಭ್ಯರ್ಥಿಗಳಿಗೆ ಸಮನಾದ ಮತಬಿದ್ದಾಗ ಚಿಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ಇರುತ್ತದೆ ಎಲ್ಲರು ಸಹಕರಿಸಬೇಕು ಎಂದರು.
ಸಹಾಯಕ ಚುಣಾವಣಾಧಿಕಾರಿ ಸಿದ್ಧಗಿರಿ ನ್ಯಾಮಗೌಡ, ಸಹಕಾರ ಇಲಾಖೆಯ ಸಾರವಾನ, ಬ್ಯಾಂಕ ವ್ಯವಸ್ಥಾಪಕ ಸಂಗಪ್ಪ ತುಪ್ಪದ, ಸಂತೋಷ ಹಳ್ಯಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.