ರಬಕವಿ ಬನಹಟ್ಟಿ: ಇಲ್ಲಿನ ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್, ಕೇಂದ್ರ ಸಹಕಾರಿ ಕ್ಷೇತ್ರದ ಬ್ಯಾಂಕೋ ‘ಬ್ಲ್ಯೂ ರಿಬ್ಬನ್’ ಪ್ರಶಸ್ತಿಗೆ ಭಾಜನವಾಗಿದೆ’ ಎಂದು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸುರೇಶ ಅಬಕಾರ ಹೇಳಿದರು.
ನಗರದ ಬ್ಯಾಂಕ್‌ನಲ್ಲಿ ಸಭಾ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಈ ಭಾಗದ ನೇಕಾರರ ಮತ್ತು ರೈತರ ಅಭಿವೃದ್ಧಿಗೆ ಬದ್ಧವಾಗಿದೆ. ಅಂದಾಜು ₹70 ಕೋಟಿಯಷ್ಟು ಠೇವು ಹಣ ಹೊಂದಿದೆ. ಬ್ಯಾಂಕ್‌ನ ಉತ್ತಮ ಸೇವೆಗೆ ಪ್ರಶಸ್ತಿ ಬಂದಿದೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ಸೇವೆಗಳನ್ನು ನೀಡಲಾಗುವುದು’ ಎಂದು ತಿಳಿಸಿದರು.
ಬ್ಯಾಂಕ್ ನಿರ್ದೇಶಕ ಶಂಕರ ಜುಂಜಪ್ಪನವರ ಮಾತನಾಡಿ, ‘ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಸಹಕಾರ ಸಂಘವು ರಜತ ಮಹೋತ್ಸವ ಆಚರಿಸಿಕೊಂಡಿದ್ದು, ಸಂಘದ ಪ್ರಗತಿಯಲ್ಲಿ ನಿರ್ದೇಶಕ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಪಾತ್ರ ಬಹಳಷ್ಟು ಮುಖ್ಯವಾಗಿದೆ’ ಎಂದರು.
ಉಪಾಧ್ಯಕ್ಷ ಮಲ್ಲಿನಾಥ ಕಕಮರಿ, ಸಿದ್ರಾಮ ಸವದತ್ತಿ, ಓಂಪ್ರಕಾಶ ಕಾಬರಾ, ರಾಮಣ್ಣ ಭದ್ರನವರ, ಶ್ರೀಶೈಲ ಯಾದವಾಡ, ರಾಜಶೇಖರ ಶಿವಪೂಜಿ, ಈಶ್ವರ ಪಟಗುಂಡಿ, ಶಂಕರ ಕೆಸರಗೊಪ್ಪ, ಈರಣ್ಣ ಬಾಣಕಾರ, ದೇವೇಂದ್ರ ಬಸಪ್ಪಗೋಳ, ಮಲ್ಲು ಗಸ್ತಿ, ಸವಿತಾ ಬಾಣಕಾರ, ರೇಖಾ ಹಿರೇಮಠ, ಮಹೇಂದ್ರ ಹೊರಗಿನಮನಿ, ಶಿವಲಿಂಗ ಫಕೀರಪೂರ, ಕಾರ್ಯದರ್ಶಿ ಮಹಾಲಿಂಗ ಬಾಗಲಕೋಟ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.