ADVERTISEMENT

ಕುಳಗೇರಿ ಕ್ರಾಸ್: ಕಳಸಮ್ಮದೇವಿ ಜಾತ್ರಾ ಮಹೋತ್ಸವ ನ.25ರಿಂದ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:21 IST
Last Updated 19 ನವೆಂಬರ್ 2025, 2:21 IST

ಕುಳಗೇರಿ ಕ್ರಾಸ್: ಸಮೀಪದ ಸುಕ್ಷೇತ್ರ ಕಳಸ ಗ್ರಾಮದ ಆರಾಧ್ಯ ದೇವತೆ ಕಳಸಮ್ಮದೇವಿ ಜಾತ್ರಾ ಮಹೋತ್ಸವ ನ.25ರಂದು ನೂತನವಾಗಿ ನಿರ್ಮಿಸಲಾಗಿರುವ ಗಡ್ಡಿ ತೇರಿನ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ.

ನ.26 ರಂದು  ಬೆಳಿಗ್ಗೆ 11 ಗಂಟೆಗೆ ಕಳಸಮ್ಮದೇವಿ ಉತ್ಸವ ಮೂರ್ತಿ ಗ್ರಾಮದ ಪಾದಗಟ್ಟಿವರಗೆ ಮೆರವಣಿಗೆ ನಡೆಯಲಿದೆ. ಮದ್ಯಾಹ್ನ 12.25 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ದಾಸೋಹ ಜರುಗಲಿದೆ. ರಾತ್ರಿ 8 ಗಂಟೆಗೆ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.

ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ನರಸಾಪುರ ಹಿರೇಮಠದ ಮರುಳಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ರೋಣ ನಗರದ ಬೂದಿಸ್ವಾಮಿಮಠದ ವಿಶ್ವನಾಥದೇವರು ಹಿರೇಮಠ ಸ್ವಾಮೀಜಿ ವಹಿಸಲಿದ್ದಾರೆ. ರಾತ್ರಿ 10.30 ಕ್ಕೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿ ಗ್ರಾಮದ ಆಂಜನೇಯ ಪುತ್ರ ನಾಟ್ಯ ಸಂಘದವರಿಂದ 'ತಾಯಿಯ ಋಣ ಮಣ್ಣಿನ ಗುಣ' ಎಂಬ ಸುಂದರ ಸಾಮಾಜಿಕ ನಾಟಕವನ್ನು ಅಭಿನಯಿಸಲಿದ್ದಾರೆ. ಕಳಸಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ತನು-ಮನ- ಧನದಿಂದ ದೇವಿ ಕ್ರಪಗೆ ಪಾತ್ರರಾಗುವಂತೆ ಎಂದು ಜಾತ್ರಾ ಆಡಳಿತ ಮಂಡಳಿ ಅವರು ಪ್ರಕಟಣೆಗೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.