ಮಹಾಲಿಂಗಪುರ: ಗಡಿಯಲ್ಲಿ ಯೋಧರು ಮಾಡುವ ತ್ಯಾಗದಿಂದ ನಾವು ಸುಖವಾಗಿ ನಿದ್ರೆ ಮಾಡಲು, ನೆಮ್ಮದಿಯಾಗಿ ಬಾಳ್ವೆ ಮಾಡಲು ಸಾಧ್ಯವಾಗಿದೆ ಎಂದು ಕೆಎಲ್‍ಇ ಡಿಪ್ಲೊಮಾ ಕಾಲೇಜು ಪ್ರಾಚಾರ್ಯ ಎಸ್.ಐ.ಕುಂದಗೋಳ ಹೇಳಿದರು.
ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಿ ಮಾತನಾಡಿದರು.
ನಾಗರಿಕರಾದ ನಾವು ರೈತ ಸುರಿಸುವ ಬೆವರು ಮತ್ತು ಯೋಧ ಹರಿಸುವ ರಕ್ತಕ್ಕೆ ಋಣಿಯಾಗಿರಬೇಕು. ಕಾರ್ಗಿಲ್ ವಿಜಯದಲ್ಲಿ ಭಾಗಿಯಾದ ಯೋಧರ ಜೊತೆ ನಾವಿರುವುದೇ ಸೌಭಾಗ್ಯದ ಸಂಗತಿ ಎಂದರು.
ನಿವೃತ್ತ ಯೋಧ, ಕಾರ್ಗಿಲ್ ಯುದ್ಧದ ಗಾಯಾಳು ಶಿವಾನಂದ ಪರಪ್ಪನವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾರ್ಗಿಲ್ ಕದನದ ಕರಾಳ ದಿನಗಳನ್ನು ಮತ್ತು ವಿಜಯದ ವೀರೋತ್ಸಾಹದ ಕ್ಷಣಗಳನ್ನು ಹಂಚಿಕೊಂಡರು. ರಾಷ್ಟ್ರಧ್ವಜ ಹಾರಾಡುತ್ತಿರುವುದು ಗಾಳಿಯಿಂದಲ್ಲ, ಯೋಧನ ಉಸಿರಿನಿಂದ ಎಂಬುದನ್ನು ಮಾರ್ಮಿಕವಾಗಿ ಹೇಳಿದರು.
ಮಾಜಿ ಸೈನಿಕರಾದ ಹನಮಂತ ಕುರಿ, ಮಹಾಂತೇಶ ಮಿರ್ಜಿ, ಸಿದ್ರಾಮ ಹೊಸಮನಿ, ಐ.ಜಿ.ಚಿಂದಿ, ಬಿ.ಎಸ್.ಉದ್ದಪ್ಪಗೋಳ, ಮಹಾಂತೇಶ ಅಂಗಡಿ, ಮುರುಗೇಂದ್ರ ಗಾಡವಿ, ಮಹಾದೇವ ತೇಲಿ, ರವಿ ಕ್ಯಾತನ್ನವರ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಮಹಾದೇವಿ ಅಂಬಿ, ಗುರುರಾಜ ಅಥಣಿ, ಉಮೇಶ ಹಾದಿಮನಿ, ಸುಭಾಸ್ ಮೂಶಿ, ವಿಶಾಲ್ ಮೆಟಗುಡ್ಡ, ಅಮೀತ ಜಾಧವ, ಮಂಜುನಾಥ ಅರಕೇರಿ, ವಂದನಾ ಪಸಾರ, ಸವಿತಾ ಗೊಂದಿ, ಚೈತ್ರಾ ಹುದ್ದಾರ, ಅಂಜನಾ ಮಾಲಜ, ಸವಿತಾ ಬೀಳಗಿ, ನಿರ್ಮಲಾ ಫಕೀರಪುರ, ಲಕ್ಷ್ಮೀ ಅಂಗಡಿ, ಸಾಕ್ಷಿ ಕೋರಿಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.