ADVERTISEMENT

ಕೃಷ್ಣಾ ನದಿಗೆ ಮಹಾರಾಷ್ಟ್ರದ ನೀರು: ದೂರವಾದ ಆತಂಕ

​ಪ್ರಜಾವಾಣಿ ವಾರ್ತೆ
Published 6 ಮೇ 2023, 14:31 IST
Last Updated 6 ಮೇ 2023, 14:31 IST
ಅಮೀನಗಡ ಸಮೀಪದ ಸಿದ್ಧನಕೊಳ್ಳದಲ್ಲಿ ಸತ್ಸಂಗ ಕಾರ್ಯಕ್ರಮ ನಡೆಯಿತು
ಅಮೀನಗಡ ಸಮೀಪದ ಸಿದ್ಧನಕೊಳ್ಳದಲ್ಲಿ ಸತ್ಸಂಗ ಕಾರ್ಯಕ್ರಮ ನಡೆಯಿತು   

ರಬಕವಿ ಬನಹಟ್ಟಿ: ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 2 ಟಿಎಂಸಿ ಯಷ್ಟು ನೀರಿನನ್ನು ಬಿಟ್ಟಿದ್ದರಿಂದ ಹಿಪ್ಪರಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಲಾಗುತ್ತಿದೆ.

ಇದರಿಂದಾಗಿ ಈ ಬಾರಿಯ ಬೇಸಿಗೆಯಲ್ಲಿ ಯಾವುದೆ ರೀತಿಯ ಸಮಸ್ಯೆ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಅಥಣಿ ತಾಲ್ಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಯಾವುದೆ ತೊಂದರೆಯಾಗುವುದಿಲ್ಲ. ಆದರೂ ಜನರು ನೀರನ್ನು ಮಿತವಾಗಿ ಬಳಸಬೇಕು ಎಂದು ಜಲಾಶಯದ ಸಹಾಯಕ ಎಂಜಿನಿಯರ್ ವಿಠ್ಠಲ ನಾಯಕ ತಿಳಿಸಿದರು.

ಇದುವರೆಗೂ ಸಮೀಪದ ಕೃಷ್ಣಾ ನದಿಯಲ್ಲಿ ಮತ್ತು ತಾಲ್ಲೂಕಿನ ಹಿಪ್ಪರಗಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಹಿಪ್ಪರಗಿ ಜಲಾಶಯದಿಂದ 0.6 ಟಿಎಂಸಿ ನೀರನ್ನು ನದಿಯ ಮುಂಭಾಗಕ್ಕೆ ಬಿಡುಗಡೆ ಮಾಡಲಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ನೀರಿನ ಕೊರತೆ ಎದುರಾಗುತ್ತಿತ್ತು. ಆದರೆ ಈಗ ಈ ಆತಂಕ ದೂರವಾಗಿದೆ.

ADVERTISEMENT

Cut-off box - ‘ಯೋಗ ಧ್ಯಾನದಿಂದ ನೆಮ್ಮದಿ’ ಅಮೀನಗಡ: ಪ್ರತಿದಿನ ಯೋಗದೊಂದಿಗೆ ಧ್ಯಾನ ಪ್ರಾಣಾಯಾಮ ಮಾಡುವುದನ್ನು ಅಳವಳಡಿಸಿಕೊಂಡರೆ ಮಾನಸಿಕ ನೆಮ್ಮದಿ ಹಾಗೂ ಉತ್ತಮ ಅರೋಗ್ಯ ಹೊಂದಲು ಸಾಧ್ಯವೆಂದು ಸತ್ಸಂಗ ಸಂಚಾಲಕ ರಮೇಶ ದಡ್ಡೇನವರ ಹೇಳಿದರು. ಸಮೀಪದ ಸಿದ್ದನಕೊಳ್ಳ ಕನ್ನಿಕಾ ಪರಮೇಶ್ವರಿ ದೇವಾಲಯ ಆವರಣದಲ್ಲಿ ನಡೆದ 'ಸತ್ಸಂಗ ಸಂಭ್ರಮ ಚಿಂತನೆ 1' ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಗ ಧ್ಯಾನ ಮಾಡಿ ಸಾಧಕರಾಗಲು ಸಾಧ್ಯವೆಂದು ಹೇಳಿದರು. ಇಂದಿರಾ ಲಾತೂರಕರ ಮಾತನಾಡಿ ಧ್ಯಾನ ಮಾಡಿದರೆ ಶಾಂತಿ ನೆಮ್ಮದಿ ಪಡೆಯುವುದರ ಜೊತೆಗೆ ಬಿಪಿ ಶುಗರ್ ರಕ್ತದೊತ್ತಡ ಹತ್ತು ಹಲವು ರೋಗಗಳಿಂದ ಮುಕ್ತಿ ಹೊಂದಬಹುದಾಗಿದೆ ಎಂದರು ಶ್ರೀನಿವಾಸ ಲಾತೂರಕರ ಎಸ್ಎನ್ ಗೌಡರ ಮಲ್ಲಣ್ಣ ಟಾಣ್ಣನವರ ಪ್ರಸಾದ ಶಿರೋಳ ಸುರೇಶ ನಾಯಕ ಸಂಗಮೇಶ ಬಾರಿಗಿಡದ ಶಂಕರ ಮಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.