ADVERTISEMENT

‘ಭಾಷೆ ಕಲಿಕೆ ನಿರಂತರ’: ಎಸ್.ಬಿ.ಕೃಷ್ಣಗೌಡರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 12:46 IST
Last Updated 17 ಜುಲೈ 2023, 12:46 IST
ಲೋಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೋಡಿಲಿಪಿ ಕುರಿತು ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೃಷ್ಣಗೌಡರ ಮಾತನಾಡಿದರು
ಲೋಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೋಡಿಲಿಪಿ ಕುರಿತು ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೃಷ್ಣಗೌಡರ ಮಾತನಾಡಿದರು   

ಲೋಕಾಪುರ: ‘ಭಾಷೆ ಕಲಿಕೆ ನಿರಂತರ. ಅದು ಒಂದು ಸಂಪರ್ಕಸಾಧನವಾಗಿದೆ’ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೃಷ್ಣಗೌಡರ ಹೇಳಿದರು.

ಪಟ್ಟಣದ ಸಿ.ಎಂ.ಪಂಚಕಟ್ಟಿಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೋಡಿ ದಾಖಲೆಗಳ ಐತಿಹಾಸಿಕ ಮಹತ್ವ ಎಂಬ ವಿಷಯದ ಕುರಿತು ಒಂದು ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸಿನ ಮುಕ್ತಾಯ ಸಮಾರಂಭದಲ್ಲಿ ಮಾತಾಡಿದರು.

‘ಮೋಡಿ ಲಿಪಿಯಂತಹ ದಾಖಲೆಗಳನ್ನು ಕಲಿಯುವುದರಿಂದ ಬೇರೆ ಬೇರೆ ಭಾಷೆಗಳನ್ನು ಅರಿಯಲು ಸಾಧ್ಯ. ಮೋಡಿ ದಾಖಲೆಗಳ ಅಧ್ಯಯನದಿಂದ ಸ್ಧಳೀಯ ಚರಿತ್ರೆ ಕಟ್ಟಿಕೊಡಲು ಸಾಧ್ಯ’ ಎಂದು ತಿಳಿಸಿದರು.

ADVERTISEMENT

ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಮಾತನಾಡಿ, ‘ವಿದ್ಯಾರ್ಥಿಗಳು ಮೋಡಿಲಿಪಿ ಜ್ಞಾನವನ್ನು ಮುಂದುವರೆಸಿಕೊಂಡು ದೇಶದ ಅನೇಕ ಭಾಗಗಳಲ್ಲಿ ಮೋಡಿ ಲಿಪಿ ಅಧ್ಯಯನ ಮಾಡಿದರೆ ಹೊಸ ಹೊಸ ಸಂಶೋಧನೆ ಮಾಡಲು ಸಾದ್ಯವಾಗುತ್ತದೆ’ ಎಂದರು.

ಪ್ರಾಚಾರ್ಯ ಡಾ.ಎಸ್.ಪಿ.ಕೊಕಟನೂರ ಅಧ್ಯಕ್ಷತೆ ವಹಿಸಿದ್ದರು. ಕಾವ್ಯಾ ಪಾಟೀಲ, ಲಕ್ಷ್ಮೀ ಪಾಟೀಲ, ತಿಮ್ಮಾರೆಡ್ಡಿ, ಪ್ರೀತಿ ಮಿಲಾನಟ್ಟಿ,ಸಂಗಯ್ಯ ಗಣಾಚಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.