ಲೋಕಾಪುರ: ಕೃಷಿ ಪತ್ತಿನ ಸಹಕಾರ ಸಂಘದ ಲಾಭವನ್ನು ರೈತರು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಂಘದ ಅಧ್ಯಕ್ಷ ಹೊಳಬಸು ಕಾಜಗಾರ ಹೇಳಿದರು.
ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಬುಧವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ರೈತರ ಸಹಕಾರದಿಂದ ಸಂಘ 2024–25ನೇ ಸಾಲಿನಲ್ಲಿ ಸಂಘ ₹5 ಲಕ್ಷ ಲಾಭ ಮಾಡಿದೆ. ರೈತರಿಗೆ ಹೆಚ್ಚಿನ ಸಹಾಯ ಮಾಡಲು ಅನುಕೂಲವಾಗುತ್ತದೆ. ಸರ್ಕಾರ ರೈತರಿಗೆ ಸಂಘದ ಮೂಲಕ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ರೈತರು ಪಡೆದುಕೊಳ್ಳಬೇಕು’ ಎಂದರು.
ಉಪಾಧ್ಯಕ್ಷ ತಿಪ್ಪಣ್ಣ ಅಗಸದವರ, ನಿರ್ಧೇಶಕರಾದ ಚನ್ನಪ್ಪ ಮುದ್ದಾಪೂರ, ಮಾರುತಿ ರಂಗನ್ನವರ, ರಮೇಶ ಯರಗಟ್ಟಿ, ಚನ್ನಬಸಯ್ಯ ಗಣಾಚಾರಿ, ತಿಮ್ಮವ್ವ ಭೂಸರಡ್ಡಿ, ಅನಸೂಯಾ ಪಾಟೀಲ ಮುಖ್ಯಕಾರ್ಯನಿರ್ವಾಹಕ ಕೃಷ್ಣಾ ನಿಂಗನಗೌಡರ ಇದ್ದರು.ಲೋಕಾಪುರ, ಜಾಲೀಕಟ್ಟಿ. ಬಿ.ಕೆ. ಜಾಲೀಕಟ್ಟಿ.ಕೆ.ಡಿ. ಚೌಡಾಪೂರ ಗ್ರಾಮದ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.