ADVERTISEMENT

ಮಹಾಲಿಂಗಪುರ | ಬಸ್ ನಿಲ್ದಾಣದಲ್ಲಿ ಮಹಿಳೆ ಕಳೆದುಕೊಂಡಿದ್ದ ಆಭರಣ ಮರಳಿಸಿದ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 2:49 IST
Last Updated 12 ಸೆಪ್ಟೆಂಬರ್ 2025, 2:49 IST
ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಮಹಿಳೆಗೆ 1 ತೊಲೆ ಬಂಗಾರದ ಆಭರಣವನ್ನು ಸಾರಿಗೆ ನಿಯಂತ್ರಣ ಅಧಿಕಾರಿ ನೀಡಿದರು 
ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಮಹಿಳೆಗೆ 1 ತೊಲೆ ಬಂಗಾರದ ಆಭರಣವನ್ನು ಸಾರಿಗೆ ನಿಯಂತ್ರಣ ಅಧಿಕಾರಿ ನೀಡಿದರು    

ಮಹಾಲಿಂಗಪುರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ 1ತೊಲೆ ಬಂಗಾರದ ಆಭರಣವನ್ನು ಕಳೆದುಕೊಂಡಿದ್ದ ಮಹಿಳೆಗೆ ಅದನ್ನು ಮರಳಿಸುವ ಮೂಲಕ ಸಾರಿಗೆ ನಿಯಂತ್ರಣ ಅಧಿಕಾರಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಗೋಕಾಕದಿಂದ ಆಗಮಿಸಿದ್ದ ಮಹಿಳೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಬನಹಟ್ಟಿಗೆ ಹೋಗಲು ಬಸ್‍ಗಾಗಿ ಕಾಯುತ್ತ ಕುಳಿತಿದ್ದಳು. ಈ ವೇಳೆ ಬಂಗಾರದ ಆಭರಣ ಕಳೆದುಕೊಂಡಿದ್ದು ಗಮನಕ್ಕೆ ಬಂದು ಚೀರಾಡಿ ಅಳಲು ಆರಂಭಿಸಿದಳು. ಬಂಗಾರದ ಆಭರಣ ಬಸ್ ನಿಲ್ದಾಣದ ಆವರಣದಲ್ಲಿಯೇ ಬಿದ್ದಿದ್ದನ್ನು ಗಮನಿಸಿದ ಸಾರಿಗೆ ನಿಯಂತ್ರಣ ಅಧಿಕಾರಿ ಎಸ್.ಬಿ.ಜಂಬಗಿ, ಮಹಿಳೆಯನ್ನು ಕರೆದು ಆಕೆಗೆ ಅದನ್ನು ಮರಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT