ADVERTISEMENT

ಮಹಾಲಿಂಗಪುರ: ಮಂಟೂರಿನ ಜೋಡೆತ್ತು ಪ್ರಥಮ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:03 IST
Last Updated 4 ಜುಲೈ 2025, 13:03 IST
ಮಹಾಲಿಂಗಪುರದಲ್ಲಿ ನಡೆದ ತೆರಬಂಡಿ ವೈಭವದಲ್ಲಿ ಪ್ರಥಮ ಸ್ಥಾನ ಪಡೆದ ಮಂಟೂರ ಗ್ರಾಮದ ಜೋಡೆತ್ತು ಮಾಲೀಕರಿಗೆ ಬಹುಮಾನ ವಿತರಿಸಲಾಯಿತು 
ಮಹಾಲಿಂಗಪುರದಲ್ಲಿ ನಡೆದ ತೆರಬಂಡಿ ವೈಭವದಲ್ಲಿ ಪ್ರಥಮ ಸ್ಥಾನ ಪಡೆದ ಮಂಟೂರ ಗ್ರಾಮದ ಜೋಡೆತ್ತು ಮಾಲೀಕರಿಗೆ ಬಹುಮಾನ ವಿತರಿಸಲಾಯಿತು    

ಮಹಾಲಿಂಗಪುರ: ಪಟ್ಟಣದ ಭಗೀರಥ ವೃತ್ತದ ಸಾಧುನಗುಡಿ ರಸ್ತೆಯಲ್ಲಿ ಬಸವೇಶ್ವರ ಜಾತ್ರಾ ಕಮೀಟಿ ವತಿಯಿಂದ ಮೂರು ದಿನಗಳವರೆಗೆ ನಡೆದ ತೆರಬಂಡಿ ವೈಭವದಲ್ಲಿ ಮಂಟೂರ ಗ್ರಾಮದ ಜೋಡೆತ್ತು ಪ್ರಥಮ ಸ್ಥಾನ ಗಳಿಸಿದವು.

ಮಂಗಳವಾರದಿಂದ ಗುರುವಾರದವರೆಗೆ ನಡೆದ ತೆರಬಂಡಿ ವೈಭವದಲ್ಲಿ ಅಕ್ಕಿಮರಡಿ, ಬಬಲಾದಿ, ಮುಧೋಳ, ತಳಕಟ್ನಾಳ, ಬಿದರಿ, ಮುಗಳಖೋಡ ಸೇರಿದಂತೆ ವಿವಿಧ ಭಾಗದ 122 ಜೋಡೆತ್ತು ಭಾಗವಹಿಸಿದ್ದವು. ಸಂಕ್ರಟ್ಟಿಯ ಜೋಡೆತ್ತು ದ್ವಿತೀಯ, ಚಿಮ್ಮಡದ ಜೋಡೆತ್ತು ತೃತೀಯ, ಒಂಟಗೋಡಿಯ ಜೋಡೆತ್ತು ಚತುರ್ಥ ಸ್ಥಾನ ಪಡೆದವು.

ಗುರುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಥಮ ನಾಲ್ಕು ಸ್ಥಾನ ಪಡೆದ ಜೋಡೆತ್ತು ಮಾಲೀಕರಿಗೆ ಬೈಕ್, ನಗದು ಬಹುಮಾನ ಹಾಗೂ ನಂತರ 21 ಸ್ಥಾನ ಪಡೆದ ಜೋಡೆತ್ತು ಮಾಲೀಕರಿಗೆ ವಿವಿಧ ರೀತಿಯ ಬಹುಮಾನ ವಿತರಿಸಲಾಯಿತು.

ADVERTISEMENT

ಬಸವೇಶ್ವರ ಜಾತ್ರಾ ಕಮೀಟಿ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ಮುಸ್ತಾಕ ಚಿಕ್ಕೋಡಿ, ನಜೀರ್ ಝಾರೆ, ವಿಜುಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ಶ್ರೀಶೈಲಗೌಡ ಪಾಟೀಲ, ಸದಾಶಿವ ಗೊಬ್ಬರದ, ಅರ್ಜುನ ಮೋಪಗಾರ, ಸಾಯಿ ಉಪ್ಪಾರ, ಕರೆಪ್ಪ ಕಪರಟ್ಟಿ, ಶ್ರೀನಿವಾಸ ಮಾಲಬಸರಿ, ಮಹಾಲಿಂಗ ಮಾಳಿ, ಮಹಾಲಿಂಗ ಪಾಟೀಲ, ಅನೀಲ ದೇಸಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.