ADVERTISEMENT

ಗುಳೇದಗುಡ್ಡ | 'ಸಾಮೂಹಿಕ ವಿವಾಹ 19ಕ್ಕೆ'

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:15 IST
Last Updated 16 ಏಪ್ರಿಲ್ 2025, 14:15 IST

ಗುಳೇದಗುಡ್ಡ: ತಾಲ್ಲೂಕಿನ ಪರ್ವತಿ ಗ್ರಾಮದ ರಾಜಋಷಿ ಭಗೀರಥ ಉಪ್ಪಾರ ಸಂಘ, ವೀರಭದ್ರೇಶ್ವರ ಯುವಕ ಸಂಘದ ಸಹಯೋಗದಲ್ಲಿ ಏ.8 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಏ.19 ರಂದು ಸರ್ವ ಧರ್ಮ ಸಾಮೂಹಿಕ ವಿವಾಹ  ನಡೆಯಲಿವೆ.

ಏ.18 ರಂದು ಬೆಳಿಗ್ಗೆ 8.30ಕ್ಕೆ ರಾಜಋಷಿ ಭಗೀರಥ ಮಹರ್ಷಿ ಜಯಂತ್ಯುತ್ಸವ ಜರುಗುವುದು. ನಂತರ ಬೆಳಿಗ್ಗೆ 9.30ಕ್ಕೆ ವಾದ್ಯಗಳೊಂದಿಗೆ ಭಗೀರತ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ಹಾಗೂ ಕುಂಭ ಮೇಳ  ನಡೆಯಲಿದೆ. ಏ.19 ರಂದು  ಸರ್ವಧರ್ಮಗಳ ಸಾಮೂಹಿಕ ವಿವಾಹ ನಡೆಯಲಿದೆ.

ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಶ್ರೀ, ಗುಳೇದಗುಡ್ಡದ ಗುರುಸಿದ್ದೇಶ್ವರ ಮಠದ ಬಸವರಾಜ ಶ್ರೀ, ಮುರಘಾಮಠದ ಕಾಶೀನಾಥ ಶ್ರೀ, ಕೋಟೆಕಲ್-ಕಮತಗಿಯ ಹೊಳೆ ಹುಚ್ಚೇಶ್ವರ ಶ್ರೀ, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಶ್ರೀ, ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀ ಸಾನ್ನಿಧ್ಯ ವಹಿಸುವರು. ವಧು–ವರರಿಗೆ ಬಟ್ಟೆ ಹಾಗೂ 2 ತಾಳಿ ಮತ್ತು ಕಾಲುಂಗುರ ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ 9632632003, 9986611970 ಸಂಪರ್ಕಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.