ಮುಧೋಳ: ‘ಭಾರತ ಪ್ರಪಂಚದಲ್ಲಿ ವಿಶ್ವಗುರು ಆಗಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ದೇಶದ ಭದ್ರತೆಗೆ ಅಗತ್ಯವಾಗಿದೆ’ ಎಂದು ನಮೋ ಬ್ರೀಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಹೇಮರಡ್ಡಿ ಮಲ್ಲಮ್ಮ ಮೈದಾನದಲ್ಲಿ ಮಂಗಳವಾರ ನಮೋ ಬ್ರಿಗೇಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಎಂಪಿ ಆಯ್ಕೆ ಮಾಡುವ ಚುನಾವಣೆಯಲ್ಲ. ಪಿಎಂ ಆಯ್ಕೆ ಮಾಡುವ ಚುನಾವಣೆ. ಕಾಂಗ್ರೆಸ್ ಪಕ್ಷಕ್ಕೆ ನರೇಂದ್ರ ಮೋದಿ ಅವರ ಬಗ್ಗೆ ಜನರ ಪ್ರೀತಿ, ವಿಶ್ವಾಸ ಕಂಡು ಭಯ ಆರಂಭವಾಗಿದೆ’ ಎಂದರು.
‘ಜವಾಹರಲಾಲ್ ನೆಹರು ಸೇರಿದಂತೆ ರಾಜೀವ್ ಗಾಂಧಿ ಹಿಡಿದು ಮನಮೊಹನ ಸಿಂಗ್‌ವರೆಗೂ ಯಾರು ಜನರೊಂದಿಗೆ ಮಾತನಾಡಿಲ್ಲ. ಆದರೆ ಮೋದಿ ರೇಡಿಯೊ ಉಪಯೋಗಿಸಿ ‘ಮನ್ ಕಿ ಬಾತ್’ ಮಾಡಿದರು. ಮೋದಿ ಅವರ 22 ವರ್ಷದ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಕೋವಿಡ್ ವ್ಯಾಕ್ಸಿನ್ ತಯಾರಿಸಿ ವಿದೇಶಗಳಿಗೆ ನೀಡಿ ದೇಶದ ಜನರನ್ನು ಮೋದಿ ರಕ್ಷಿಸಿದರು’ ಎಂದು ಹೇಳಿದರು.
‘ಈ ಬಾರಿ ಮೋದಿಯನ್ನು ಕಳೆದುಕೊಳ್ಳುವುದು ಬೇಡ, ಅದಕ್ಕಾಗಿ ನಾನು 150ಕ್ಕಿಂತ ಹೆಚ್ಚು ಕಡೆ ಸಮಾವೇಶ ಮಾಡುತ್ತಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.