ಬಾದಾಮಿ: ಪಟ್ಟಣದ ಹೃದಯ ಭಾಗದಲ್ಲಿರುವ ಮಾರುತಿ ದೇವಾಲಯದಿಂದ ಪುರದ ಶಕ್ತಿದೇವತೆಗಳ ದೇವಾಲಯದವರೆಗೆ ಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿಯನ್ನು ಪುರಸಭೆಯು ಆರಂಭಿಸಿದೆ.
ಹದಗೆಟ್ಟಿರುವ ರಸ್ತೆಯ ಬಗ್ಗೆ ಪ್ರಜಾವಾಣಿ ಪತ್ರಿಕೆಯ ನಮ್ಮಜನ- ನಮ್ಮ ಧ್ವನಿಯಲ್ಲಿ ಈಚೆಗೆ ಪ್ರಕಟಿಸಿತ್ತು. ಎಚ್ಚೆತ್ತುಗೊಂಡ ಪುರಸಭೆ ರಸ್ತೆ ಪಕ್ಕದಲ್ಲಿ ನೂತನ ಚರಂಡಿ ಮತ್ತು ರಸ್ತೆ ಕಾಮಗಾರಿಯನ್ನು ಆರಂಭಿಸಿದ್ದು ಕಂಡು ಬಂದಿತು.
ಪ್ರವಾಸಿಗರು ನಿತ್ಯ ಇದೇ ರಸ್ತೆಯಿಂದ ವಾಹನದ ಮೂಲಕ ಭೂತನಾಥ ದೇವಾಲಯ, ಮ್ಯೂಸಿಯಂಗೆ ಹೋಗುತ್ತಿದ್ದರು. ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗಿತ್ತು. ಈಚೆಗೆ ಸುರಿದ ಮಳೆಯಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದನ್ನು ಸ್ಮರಿಸಬಹುದು.
‘ಅಲ್ಪಸಂಖ್ಯಾತರ ನಿಗಮದ ಅನುದಾನದಿಂದ ಎರಡು ವರ್ಷಗಳ ಹಿಂದೆ ಮ್ಯೂಸಿಯಂ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಸಾರ್ವಜನಿಕರು ಸಹಕಾರ ಕೊಡದ ಕಾರಣ ಅರ್ಧಕ್ಕೆ ಕಾಮಗಾಗಿ ಸ್ಥಗಿತವಾಗಿತ್ತು. ಜನರ ಸಹಕಾರದಿಂದ ರಸ್ತೆ ಕಾಮಗಾರಿ ಆರಂಭಿಸಲಾಗಿದೆ’ ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.