ADVERTISEMENT

ಕರ್ನಾಟಕ ನದಾಫ್ ಪಿಂಜಾರ ಸಂಘದಿಂದ ಸಮಾಜದ ಜನಗಣತಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:40 IST
Last Updated 9 ಮೇ 2025, 14:40 IST
ಜಮಖಂಡಿ ಸಮೀಪದ ಕಡಪಟ್ಟಿ ಜಮಾಲ್ ಮಜರತ್ ಪೀರ ದರ್ಗಾದಲ್ಲಿ ನದಾಫ್‌ ಪಿಂಜಾರ ಸಮಾಜದ ಜನಸಂಖ್ಯೆ ಅರ್ಜಿಗಳನ್ನು ರಾಜ್ಯ ಸದಸ್ಯರಾದ ಸಾಹೇಬಲಾಲ ನದಾಫ ಬಿಡುಗಡೆಗೊಳಿಸಿದರು
ಜಮಖಂಡಿ ಸಮೀಪದ ಕಡಪಟ್ಟಿ ಜಮಾಲ್ ಮಜರತ್ ಪೀರ ದರ್ಗಾದಲ್ಲಿ ನದಾಫ್‌ ಪಿಂಜಾರ ಸಮಾಜದ ಜನಸಂಖ್ಯೆ ಅರ್ಜಿಗಳನ್ನು ರಾಜ್ಯ ಸದಸ್ಯರಾದ ಸಾಹೇಬಲಾಲ ನದಾಫ ಬಿಡುಗಡೆಗೊಳಿಸಿದರು   

ಜಮಖಂಡಿ: ರಾಜ್ಯದಲ್ಲಿ ನದಾಫ್ ಪಿಂಜಾರ ಸಮಾಜದ ಜನಸಂಖ್ಯೆ ಎಷ್ಟಿದೆ ಎಂದು ತಿಳಿಯಲು ಕರ್ನಾಟಕ ನದಾಫ್ ಪಿಂಜಾರ ಸಂಘದಿಂದ ಸಮಾಜದ ಜನಗಣತಿ ಮಾಡಲಾಗುತ್ತಿದೆ ಸಮಾಜದವರು ಸಹಕಾರ ನೀಡಬೇಕು ಎಂದು ಸಂಘದ ರಾಜ್ಯ ಸದಸ್ಯ ಸಾಹೇಬಲಾಲ ನದಾಫ್ ತಿಳಿಸಿದರು.

ಸಮೀಪದ ಕಡಪಟ್ಟಿ ಜಮಾಲ್ ಮಜರತ್ ಪೀರ ದರ್ಗಾದಲ್ಲಿ ಜಮಖಂಡಿ ತಾಲ್ಲೂಕು ಸಂಘದ ಸಭೆಯಲ್ಲಿ ಸಮಾಜದ ಜನಸಂಖ್ಯೆ ಅರ್ಜಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ನದಾಫ ಪಿಂಜಾರ ಸಮಾಜದ ಜನಸಂಖ್ಯೆ 20 ಲಕ್ಷಕ್ಕೂ ಹೆಚ್ಚು ಇದೆ. ಆದರೆ ರಾಜ್ಯ ಸರ್ಕಾರದ ವರದಿಯಲ್ಲಿ 1.1 ಲಕ್ಷ ಮಾತ್ರ ತೋರಿಸಿದ್ದಾರೆ. ಇದು ಸರಿಯಾಗಿಲ್ಲ. ರಾಜ್ಯದಲ್ಲಿ ಎಷ್ಟು ಜನಸಂಖ್ಯೆ ಇದೆ ಆರ್ಥಿಕವಾಗಿ ಯಾವ ಸ್ಥಿತಿಗತಿಯಲ್ಲಿದ್ದಾರೆ ಎಂದು ತಿಳಿಯಲು ಸಂಘದಿಂದ ಆಂತರಿಕ ಸಮೀಕ್ಷೆ ನಡೆಸಲಾಗುತ್ತಿದೆ. ಸಮಾಜದವರು ಸಹಕಾರ ನೀಡಬೇಕು’ ಎಂದು ತಿಳಿಸಿದರು.

ADVERTISEMENT

ರಾಜ್ಯ ಸದಸ್ಯ ಮೌಲಾಸಾಬ ನದಾಫ್, ತಾಲ್ಲೂಕು ಘಟಕದ ಅಧ್ಯಕ್ಷ ಚಾಂದಸಾಬ ನದಾಫ, ಯಾಕುಬ ನದಾಫ್, ರಾಜೇಸಾಬ ನದಾಫ, ಜುಬೇರ ನದಾಫ್, ಜಬ್ಬಾರ ನದಾಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.