ಹುನಗುಂದ: ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಇದ್ದಲಗಿ, ಬಿಸನಾಳ, ಗಂಜಿಹಾಳ, ಬಿಸನಾಳ ಕೊಪ್ಪ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳ ರೈತರು ಶುಕ್ರವಾರ ತಹಶೀಲ್ದಾರ್ ಪ್ರದಿಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಎರಡು-ಮೂರು ತಿಂಗಳಿನಿಂದ ಸತತ ಸುರಿಯುತ್ತಿರುವ ಮಳೆಯಿಂದ ಬಿತ್ತನೆಯಾದ ಈರುಳ್ಳಿ ಬೆಳೆ ಬಹುತೇಕ ಹಾಳಾಗಿದ್ದು, ಉಳಿದ ಅಲ್ಪಸ್ವಲ್ಪ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲದೆ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಈಗಿರುವ ದರಕ್ಕೆ ಮಾರಿದ ರೈತರು ಖರ್ಚು ಮಾಡಿದ ಅರ್ಧದಷ್ಟು ಹಣವೂ ಬರುವುದಿಲ್ಲ. ಕಾರಣ ಸರ್ಕಾರ ಕೂಡಲೇ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆದು ಕ್ವಿಂಟಲ್‌ಗೆ ₹5 ಸಾವಿರದಂತೆ ಖರೀದಿಸಬೇಕು ಮತ್ತು ಹಾನಿಯದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಅವರು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿ ಕೊಡುವ ಭರವಸೆ ನೀಡಿದರು.
ರೈತ ಮುಖಂಡರಾದ ಬಸವರಾಜ ಬಡ್ಡಿ, ಮಹಾಂತೇಶ ನಾಡಗೌಡ, ಸಂಗಣ್ಣ ಆನೆಹೊಸೂರ, ರೈಹೀಮಾನ್ ಸಾಬ ಮುಲ್ಲಾ, ಶಶಿಕಾಂತ ತಿಮ್ಮಾಪೂರ, ಕುಮಾರಸ್ವಾಮಿ ಮಠ, ಬಸಪ್ಪ ಬುದಗೋಳ, ಬಸಪ್ಪ ಜಗ್ಗಲ, ಶರಣಬಸು ತೋಟಗೇರ, ಸಂಗಪ್ಪ ಚಿಕ್ಕೊಡಿ, ಜಗದೀಶ ಗಂಜಿಹಾಳ ಕೃಷ್ಣ ಜಾಲಿಹಾಳ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.