ADVERTISEMENT

ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠ: ಪ್ರದೀಪ ಗುರೂಜಿ ಅಭಿಮತ

ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:37 IST
Last Updated 4 ಜುಲೈ 2025, 13:37 IST
ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ಗುರು-ಶಿಷ್ಯ ಪರಂಪರೆ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಪ್ರದೀಪ ಗುರೂಜಿ ಹಾಗೂ ಅರುಣ ಕಾರಜೋಳ ಉದ್ಘಾಟಿಸಿದರು
ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ಗುರು-ಶಿಷ್ಯ ಪರಂಪರೆ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಪ್ರದೀಪ ಗುರೂಜಿ ಹಾಗೂ ಅರುಣ ಕಾರಜೋಳ ಉದ್ಘಾಟಿಸಿದರು   

ರಾಂಪುರ: ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠವಾಗಿದ್ದು, ವಿದ್ಯೆಯನ್ನು ಧಾರೆಯೆರೆಯುವ ಗುರುವಿಗೆ ಭಾರತೀಯ ಪರಂಪರೆಯಲ್ಲಿ ಮಹತ್ತರ ಸ್ಥಾನ ಪ್ರಾಪ್ತವಾಗಿದೆ ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಳಿದರು.

ಸಮೀಪದ ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಗುರು-ಶಿಷ್ಯ ಪರಂಪರೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಗುರುಕುಲ ಪದ್ಧತಿಯ ಶಿಕ್ಷಣದ ವ್ಯವಸ್ಥೆಯಲ್ಲಿ ಗುರು-ಶಿಷ್ಯರ ನಡುವೆ ದೇವರು-ಭಕ್ತನ ಸಂಬಂಧವಿತ್ತು ಎಂದರು.

ಶಿಕ್ಷಣ ಕೇವಲ ಅಕ್ಷರ ಕಲಿಕೆಯಲ್ಲ, ಅದು ಜ್ಞಾನದ ಬೆಳಕು. ಇಂತಹ ಬೆಳಕಿನ ವಿದ್ಯೆಯನ್ನು ಮಕ್ಕಳಿಗೆ ನೀಡಿ ಅವರ ಉತ್ತಮ ಭವಿಷ್ಯಕ್ಕೆ ನೆರವಾಗುವ ಗುರುವನ್ನು ಸದಾ ಸ್ಮರಿಸುವ ಪರಂಪರೆ ನಮ್ಮದು ಎಂದು ಗುರೂಜಿ ಹೇಳಿದರು.

ADVERTISEMENT

ಮುಖ್ಯ ಅತಿಥಿಗಳಾಗಿದ್ದ ಬಾಗಲಕೋಟೆ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ ಮಾತನಾಡಿ, ಶಿಕ್ಷಕರಿಗೆ ಸಿಗುವಷ್ಟು ಗೌರವ ಯಾವ ಹುದ್ದೆಯಲ್ಲಿರುವ ವ್ಯಕ್ತಿಗೂ ಸಿಗುವುದಿಲ್ಲ. ಗುರುವಿನ ಮಾರ್ಗದರ್ಶನವಿಲ್ಲದೇ ಯಾರಿಗೂ ಸಾಧನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣ ನೀಡಿದ ಗುರುಗಳು ಸದಾ ಸ್ಮರಣೀಯರು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಜಿ.ಮಿರ್ಜಿ ಮಾತನಾಡಿ, ಒಬ್ಬ ಉತ್ತಮ ಶಿಕ್ಷಕನ ಸೇವೆಯನ್ನು ವಿದ್ಯಾರ್ಥಿಗಳು ಹಾಗೂ.ಸಮಾಜ ಎಂದಿಗೂ ಮರೆಯದು ಎಂದರು.

ಸಂಸ್ಥೆಯ ಅಧ್ಯಕ್ಷ ಅರುಣ ಕಾರಜೋಳ, ನಿವೃತ್ತ ಶಿಕ್ಷಕರಾದ ಎಸ್.ಎಸ್.ಜಿಗಳೂರ, ಆರ್.ಎಲ್.ಕಟಗೇರಿ, ಸಿ.ಕೆ.ಚನಾಳ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕ ಜಿ.ಜಿ.ಚಿತ್ತರಗಿ ದಂಪತಿಗಳನ್ನು ಸನ್ಮಾನಿಸಲಾಯಿತು.

ಶಂಕರಗೌಡ ಯಡಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮರಗವ್ವ ಮಾದರ, ಪಿಡಿಓ ಜ್ಯೋತಿ ಪಾಟೀಲ, ಶಂಕರಗೌಡ ದೊಡಮನಿ, ಕೆ.ಪಿ.ಅರಿಷಿನಗೋಡಿ, ಮಾಲತೇಶ ಅಮಾತೆಪ್ಪನವರ, ಕಸಾಪ ತಾಲ್ಲೂಕು ಅಧ್ಯಕ್ಷ ಪಾಂಡು ಸಣ್ಣಪ್ಪನವರ, ಮುಖ್ಯಶಿಕ್ಷಕ ಎಂ.ಎ.ಮುನವಳ್ಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.