ಬಾಗಲಕೋಟೆ: ಭಾರತದ ಸಂವಿಧಾನಾತ್ಮಕವಾಗಿ ಹಾಗೂ ಚುನಾವಣಾ ಆಯೋಗ ನೀಡಿರುವ ಹಕ್ಕಿನಂತೆ ತಾನು ವಾಸಿಸುವ ಸ್ಥಳದ ಮತದಾನ ಪಟ್ಟಿಯಲ್ಲಿ ಸೇರುವುದು ಅವರ ಹಕ್ಕು. ಅವರ ಹಕ್ಕನ್ನು ಕಸಿಯುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಆಡಳಿತ ವೈಫಲ್ಯ ಮುಚ್ಚಿಕೊಳ್ಳುಲು ಅಕ್ರಮ ಎಂಬ ಪದ ಬಳಸುವ ಮೂಲಕ ಅರ್ಹ ಮತದಾರರನ್ನು ಅಪಮಾನಿಸುತ್ತಿದೆ. ಅರ್ಹ ಮತದಾರರ ಅವಕಾಶ ವಂಚಿತರನ್ನಾಗಿ ಮಾಡಲು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದಾರೆ.
ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಶಿಕ್ಷಣ ಸಂಘ ಸಂಸ್ಥೆಗಳಲ್ಲಿ ಓದುವ ಜೊತೆಗೆ ಇಲ್ಲಿಯೇ ವಾಸವಾಗಿದ್ದಾರೆ, ತಾವು ವಾಸವಾಗಿರುವ ಪ್ರದೇಶದಲ್ಲಿ ಮತದಾನ ಮಾಡಲು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳುವುದು ಅವರ ಹಕ್ಕು. ಅರ್ಹ ಮತದಾರರಿಗೆ ವಂಚನೆಯಾದಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.