ADVERTISEMENT

ಸಂಭ್ರಮದ ರಾಮಲಿಂಗೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 3:09 IST
Last Updated 19 ಆಗಸ್ಟ್ 2025, 3:09 IST
ಶಿರೂರಿನಲ್ಲಿ ಸೋಮವಾರ ರಾಮಲಿಂಗೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು.
ಶಿರೂರಿನಲ್ಲಿ ಸೋಮವಾರ ರಾಮಲಿಂಗೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು.   

ರಾಂಪುರ: ಸಮೀಪದ ಶಿರೂರ ಪಟ್ಟಣದಲ್ಲಿ ಸೋಮವಾರ ಶ್ರಾವಣ ಕೊನೆಯ ದಿನದಂದು ರಾಮಲಿಂಗೇಶ್ವರ ದೇವರ ರಥೋತ್ಸವ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಜಾತ್ರೆಯ ಸಂಭ್ರಮ ಆರಂಭವಾಗಿ ಸಾಯಂಕಾಲ 6 ಗಂಟೆಗೆ ರಥೋತ್ಸವ ನಡೆಯಿತು. ಪಟ್ಟಣದ ಸಾವಿರಾರು ಜನ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಜಯಘೋಷದೊಂದಿಗೆ ರಥಕ್ಕೆ ಹೂವು, ಹಣ್ಣು, ಉತ್ತತ್ತಿ, ಬಾಳೆಹಣ್ಣು ಎಸೆದು ಹರಕೆ ತೀರಿಸಿದರು.

ಬೆಳಿಗ್ಗೆ ದೇವಸ್ಥಾನದಲ್ಲಿ ರಾಮಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ನಾನಾ ಪೂಜಾ ಕೈಂಕರ್ಯಗಳು ನಡೆದವು. ಮುಂಜಾನೆ 8 ಗಂಟೆಯಿಂದ 12 ರವರೆಗೆ ರಥದ ಕಳಸದ ಮೆರವಣಿಗೆ ಜರುಗಿತು. ನಂತರ ಸಾಯಂಕಾಲ 4 ಗಂಟೆಗೆ ನಂದಿ ಧ್ವಜಗಳ ಮೆರವಣಿಗೆ ನಡೆದು ರಥೋತ್ಸವ ಜರುಗಿತು. ಆ.19 ರಂದು ಜಾತ್ರೆಯ ಅಂಗವಾಗಿ ಮಧ್ಯಾಹ್ನ 3-30 ಗಂಟೆಗೆ ಜಂಗೀ ಕುಸ್ತಿಗಳನ್ನು ಆಯೋಜಿಸಲಾಗಿದೆ.

ADVERTISEMENT
ಶಿರೂರಿನಲ್ಲಿ ಸೋಮವಾರ ರಾಮಲಿಂಗೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.