ರಬಕವಿ ಬನಹಟ್ಟಿ: ಸಮೀಪದ ನಾವಲಗಿ ಗ್ರಾಮದ ಚಂದ್ರಗಿರಿ ದೇವಿ ಮತ್ತು ಸದಾಶಿವ ಅಜ್ಜನವರ ಜಾತ್ರೆ ಭಾನುವಾರ ಸಂಭ್ರಮದಿಂದ ನಡೆಯಿತು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜೆ ನಡೆಯಿತು. ನಂತರ ದೇವಸ್ಥಾನದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಸಂಜೆ ಸದಾಶಿವ ಅಜ್ಜನವರ ರಥೋತ್ಸವಕ್ಕೆ ಈ ಭಾಗದ ನೂರಾರು ಭಕ್ತರು ಸಾಕ್ಷಿಯಾದರು. ಹೂಮಾಲೆ, ದೀಪಾಲಂಕಾರ ಮಾಡಿದ ಮತ್ತು ಸಂಕಷ್ಟದ ಮಾಲೆಗಳಿಂದ ಶೃಂಗರಿಸಿದ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸದಾಶಿವ ಮಹಾರಾಜಕೀ ಜೈ ಎಂಬ ಜಯ ಜಯ ಘೋಷಣೆಗಳ ಮಧ್ಯದಲ್ಲಿ ರಥೊತ್ಸವ ನಡೆಯಿತು.
ಸಂಬಾಳ, ಕರಡಿ, ಖನಿ, ಶಹನಾಯಿ ಮತ್ತು ಚೌಡಕಿ ವಾದನಗಳ ಕಲಾವಿದರು ರಥೋತ್ಸವಕ್ಕೆ ಸಾಂಸ್ಕೃತಿಕ ಕಳೆಯನ್ನು ತಂದರು.
ಗ್ರಾಮದ ಪ್ರಮುಖರಾದ ಆನಂದ ಕಂಪು, ಹಣಮಂತ ಸವದಿ, ಲಕ್ಷ್ಮಣ ಸವದಿ, ಮಲ್ಲಪ್ಪ ಗಣಿ, ಸಿದ್ದು ಲೆಂಡಿ, ಗೋವೀಂದ ಪಾಟೀಲ, ಅಲ್ಲಪ್ಪ ಮುಗಳಖೋಡ, ಹಣಮಂತ ಲೆಂಡಿ, ಶಂಕ್ರೆಪ್ಪ ಹಳ್ಳಿ, ದಾನಪ್ಪ ಆಸಂಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.