ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇಲ್ಲಿನ ಬಸವ ಸಂಪದ ಆಶ್ರಯದಲ್ಲಿ ಆರ್.ಎಸ್. ಹುಲಗಬಾಳಿ ಪ್ರಶಸ್ತಿ ಪ್ರದಾನ ಮತ್ತು ದತ್ತಿನಿಧಿ ಉಪನ್ಯಾಸ ಸಮಾರಂಭ ಜುಲೈ ತಿಂಗಳಲ್ಲಿ ನಡೆಯಲಿದೆ.
ನಾಡಿನ ಹಿರಿಯ ಕವಿ ಸತ್ಯಾನಂದ ಪಾತ್ರೋಟರಿಗೆ ಹುಲಗಬಾಳಿ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷ ಮ.ಕೃ. ಮೇಗಾಡಿ ಮತ್ತು ಬಸವ ಸಂಪದ ಅಧ್ಯಕ್ಷ ಕಿರಣ ಆಳಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.