ಇಳಕಲ್: ನಗರದ ಮಾಹೇಶ್ವರಿ ಸಮಾಜದಿಂದ ರಾಮಾನುಜಾಚಾರ್ಯರ 1008ನೇ ಜಯಂತ್ಯುತ್ಸವ ನಿಮಿತ್ತ ರಾಮಾನುಜಾಚಾರ್ಯರ ಮೂರ್ತಿಯ ಪಲ್ಲಕ್ಕಿ ಉತ್ಸವ ಶುಕ್ರವಾರ ನಡೆಯಿತು.
ರಾಮಾನುಜಾಚಾರ್ಯರ ಜಯಂತಿ ನಿಮಿತ್ತ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ 10 ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರ ರಾಮಾನುಜಾಚಾರ್ಯರ ಮೂರ್ತಿಯ ಪಲ್ಲಕ್ಕಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಮಾಹೇಶ್ವರಿ ಸಮಾಜದ ಅಧ್ಯಕ್ಷ ಶ್ಯಾಮಸುಂದರ ಡಾಗಾ, ಮುಖಂಡರಾದ ಘನಶ್ಯಾಮ ಧರಕ, ವೇಣುಗೋಪಾಲ ದರಕ, ಜುಗಲ್‌ಕಿಶೋರ ದರಕ, ಪುರುಷೋತ್ತಮ ದರಕ, ಮನೋಹರ ಕರವಾ ರಾಮಾನುಜ ದರಕ, ವೈದ್ಯ ಪವನ ದರಕ ಸೇರಿದಂತೆ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.