ADVERTISEMENT

ಗುಡೂರು: ಯೋಧ ಚಿದಾನಂದಪ್ಪ ಸಾವು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 16:37 IST
Last Updated 24 ಆಗಸ್ಟ್ 2022, 16:37 IST
ಮೃತ ಯೋಧ ಚಿದಾನಂದಪ್ಪ ಬಜಂತ್ರಿ
ಮೃತ ಯೋಧ ಚಿದಾನಂದಪ್ಪ ಬಜಂತ್ರಿ   

ಗುಡೂರು (ಅಮೀನಗಡ): ಹದಿನೈದು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅಮೀನಗಡ ಸಮೀಪದ ಗುಡೂರು ಗ್ರಾಮದ ಯೋಧ ಚಿದಾನಂದಪ್ಪ ಯಮನಪ್ಪ ಭಜಂತ್ರಿ (54) ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ನಿಧನರಾದರು.

ದೇಶದ ಸೇವೆಗಾಗಿ ಸಿಆರ್‌ಪಿಎಫ್ ಸೇರಿದ್ದ ಅವರು ಸುಮಾರು 35 ವರ್ಷ ಸೇವೆ ಸಲ್ಲಿಸಿದ್ದರು. ಇನ್ನು ಆರು ತಿಂಗಳಲ್ಲಿ ಅವರು
ನಿವೃತ್ತಿ ಹೊಂದಬೇಕಿತ್ತು. ಮೃತ ಯೋಧನಿಗೆ ಹೆಂಡತಿ, ಇಬ್ಬರು ಮಕ್ಕಳು ಇದ್ದಾರೆ.

ಬಾಗಲಕೋಟೆ ನಗರದಲ್ಲಿ ಬೈಕ್ ಮೇಲೆ ತೆರಳುವಾಗ ಅಪಘಾತಕ್ಕೀಡಾಗಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಯೋಧನಿಗೆ ಅಂತಿಮ ನಮನ ಸಲ್ಲಿಸಲು ಗುಡೂರ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಜಮಾಯಿಸಿದ್ದರು.
ಮುಗಿಲು ಮುಟ್ಟಿದ ರೋದನ: ಮೃತ ಯೋಧನ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರಿ ಪ್ರಿಯಾ ಹಾಗೂ
ಪುತ್ರ ಪವನ ಅವರ ರೋದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.