ADVERTISEMENT

ಗೊರುಚಗೆ ಸ್ವಾಮಿ ಲಿಂಗಾನಂದ, ಸಂಗೀತಾ ಕಟ್ಟಿಗೆ ಬಸವಾತ್ಮಜೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 21:24 IST
Last Updated 9 ಜನವರಿ 2026, 21:24 IST
ಗೊರುಚ
ಗೊರುಚ   

ಬಾಗಲಕೋಟೆ: ‘ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠದಿಂದ ಜ.12ರಿಂದ ಮೂರು ದಿನ ‘39ನೇ ಶರಣ
ಮೇಳ’ ನಡೆಯಲಿದ್ದು, 13ರಂದು ಬೆಳಿಗ್ಗೆ 10.30ಕ್ಕೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್‌ ಕುಮಾರ ಶಿಂಧೆ ಅವರು ಉದ್ಘಾಟಿಸುವರು’ ಎಂದು ಉತ್ಸವ ಸಮಿತಿ ಕಾರ್ಯಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದರು.

‘ಲಿಂಗಾನಂದ ಸ್ವಾಮಿ ಸ್ಮರಣಾರ್ಥ ನೀಡುವ ‘ಸ್ವಾಮಿ ಲಿಂಗಾನಂದಶ್ರೀ’ ರಾಷ್ಟ್ರೀಯ ಪ್ರಶಸ್ತಿಗೆ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹1 ಲಕ್ಷ ನಗದು ಒಳಗೊಂಡಿದೆ. ಇದೇ ವೇಳೆ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರಿಗೆ ‘ಪ್ರಮುಖ ಪ್ರಜೆ’ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

‘ಮಾತೆ ಮಹಾದೇವಿ ಸ್ಮರಣಾರ್ಥ ನೀಡುವ ‘ಬಸವಾತ್ಮಜೆ’ ರಾಷ್ಟ್ರೀಯ ಪ್ರಶಸ್ತಿಗೆ ಗಾಯಕಿ ಸಂಗೀತಾ ಕಟ್ಟಿ ಆಯ್ಕೆ ಆಗಿದ್ದು, ಪ್ರಶಸ್ತಿಯು ₹50 ಸಾವಿರ ನಗದು ಒಳಗೊಂಡಿದೆ. ಇದೇ ವೇಳೆ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರಿಗೆ ‘ಶರಣ ಕಾಯಕ ರತ್ನ, ‍ಪತ್ರಕರ್ತ ರವಿ ಮೂಕಿ ಅವರಿಗೆ ‘ಶರಣ ಜ್ಞಾನ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT
ಸಂಗೀತಾ ಕಟ್ಟಿ