ADVERTISEMENT

ಮಹಾಲಿಂಗಪುರ | ತೆರೆಬಂಡಿ ಉತ್ಸವ: ಶಿರೋಳದ ಜೋಡೆತ್ತು ಪ್ರಥಮ

​ಪ್ರಜಾವಾಣಿ ವಾರ್ತೆ
Published 16 ಮೇ 2025, 13:52 IST
Last Updated 16 ಮೇ 2025, 13:52 IST
ಮಹಾಲಿಂಗಪುರದ ಢವಳೇಶ್ವರ ರಸ್ತೆಯ ಸಿದ್ದಪ್ಪಗೌಡ ನಗರದಲ್ಲಿ ಹೇಮವೇಮ ಯುವಕ ಮಂಡಳಿ ವತಿಯಿಂದ ನಡೆದ ತೆರಬಂಡಿ ಉತ್ಸವದಲ್ಲಿ ಜೋಡೆತ್ತು ಓಡಿದರು
ಮಹಾಲಿಂಗಪುರದ ಢವಳೇಶ್ವರ ರಸ್ತೆಯ ಸಿದ್ದಪ್ಪಗೌಡ ನಗರದಲ್ಲಿ ಹೇಮವೇಮ ಯುವಕ ಮಂಡಳಿ ವತಿಯಿಂದ ನಡೆದ ತೆರಬಂಡಿ ಉತ್ಸವದಲ್ಲಿ ಜೋಡೆತ್ತು ಓಡಿದರು   

ಮಹಾಲಿಂಗಪುರ: ಪಟ್ಟಣದ ಢವಳೇಶ್ವರ ರಸ್ತೆಯ ಸಿದ್ದಪ್ಪಗೌಡ ನಗರದಲ್ಲಿ ಹೇಮ–ವೇಮ ಯುವಕ ಮಂಡಳಿ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡ ತೆರಬಂಡಿ ಉತ್ಸವದಲ್ಲಿ ಶಿರೋಳದ ಜೋಡೆತ್ತು ಪ್ರಥಮ ಸ್ಥಾನ ಪಡೆದವು.

ತೆರಬಂಡಿ ಉತ್ಸವದಲ್ಲಿ ಮುಧೋಳ, ಹೊಸಯರಗುದ್ರಿ, ಮುಗಳ್ಯಾಳ, ರನ್ನಬೆಳಗಲಿ, ಚಿಮ್ಮಡ, ಮಿರ್ಜಿ ಸೇರಿದಂತೆ ವಿವಿಧ ಭಾಗಗಳ 42 ಜೋಡೆತ್ತುಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನ ಪಡೆದ ಶಿರೋಳ ಜೋಡೆತ್ತು ಮಾಲೀಕರಿಗೆ ₹30 ಸಾವಿರ ., ದ್ವಿತೀಯ ಸ್ಥಾನ ಪಡೆದ ದಾಸನಾಳ ಗ್ರಾಮದ ಜೋಡೆತ್ತು ಮಾಲೀಕರಿಗೆ ₹25 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಅಕ್ಕಿಮರಡಿ ಗ್ರಾಮದ ಜೋಡೆತ್ತು ಮಾಲೀಕರಿಗೆ ₹20 ಸಾವಿರ ನಗದು ಬಹುಮಾನ ಸೇರಿದಂತೆ 12 ಸ್ಥಾನ ಪಡೆದ ಜೋಡೆತ್ತು ಮಾಲೀಕರಿಗೆ ನಗದು ಬಹುಮಾನ ನೀಡಲಾಯಿತು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ರವಿಗೌಡ ಪಾಟೀಲ ಚಾಲನೆ ನೀಡಿದರು. ಲಕ್ಷ್ಮಣಗೌಡ ಪಾಟೀಲ, ಬಸನಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ಸೋಮಲಿಂಗ ಸಂಗನ್ನವರ, ಮಹಾಂತೇಶ ಪಾಟೀಲ, ಶಿವಕುಮಾರ ಪಾಟೀಲ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.