
ಬಾಗಲಕೋಟೆ: ಜಿಲ್ಲೆಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.
ಸರ್ಕಾರು ಕರ್ತವ್ಯಕ್ಕೆ ಅಡ್ಡಿ ಕೊಲೆ ಮಾಡುವ ಉದ್ದೇಶ, ಕಲ್ಲು ತೂರಾಟ ಮಾಡಿದ್ದಕ್ಕೆ ಸಂಬಂಧಿಸಿದಂತೆ 17 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಮಹಾಂತೇಶ್ವರ ಜಿದ್ದಿ ಅವರ ಎಡಕಾಲಿಗೆ ಕಲ್ಲು ಬಿದ್ದು ಮೂಳೆ ಮುರಿತವಾಗಿದೆ. ಬನಹಟ್ಟಿ ಸಿಪಿಐ ಎಚ್.ಆರ್. ಪಾಟೀಲ ಅವರ ಬೆನ್ನಿಗೆ ಕಲ್ಲು ಬಿದ್ದು ಗಾಯವಾಗಿದೆ. ಕೆಎಸ್‌ಆರ್‌ಪಿ ಸಿಬ್ಬಂದಿ ಬಿ.ಎಂ. ಪತ್ತಾರ ಅವರ ಕುತ್ತಿಗೆಗೆ ಕಲ್ಲು ಬಿದ್ದು, ಪೆಟ್ಟಾಗಿದೆ ಎಂದು ಸ್ವಯಂಪ್ರೇರಿತ ದೂರಿನಲ್ಲಿ ತಿಳಿಸಲಾಗಿದೆ.
ತಳ್ಳಾಡಿದ್ದಲ್ಲದೇ, ಟ್ರ್ಯಾಕ್ಟರ್ ಟ್ರೇಲರ್, ಟ್ರ್ಯಾಕ್ಟರ್ ಎಂಜಿನ್, ದ್ವಿಚಕ್ರ ವಾಹನಗಳನ್ನು ಸುಡಲಾಗಿದೆ. ಸರ್ಕಾರಿ ವಾಹನಗಳಿಗೆ ಕಲ್ಲು ಎಸೆದು ನಷ್ಟ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬೆಂಕಿ ನಂದಿಸಲು ಬಂದಿದ್ದ ಅಗ್ನಿಶಾಮಕ ವಾಹನ, ಇನ್ನೊಂದು ವಾಹನಕ್ಕೆ ಕಲ್ಲು ಒಡೆಯಲಾಗಿದೆ ಎಂದು ದೂರು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.