ADVERTISEMENT

ಜಮಖಂಡಿ ಸಂಚಾರ ಪೊಲೀಸ್‌ ವ್ಯವಸ್ಥೆ; ಎಸ್‌ಪಿ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 11:58 IST
Last Updated 28 ಅಕ್ಟೋಬರ್ 2020, 11:58 IST
ಜಮಖಂಡಿ ನಗರದಲ್ಲಿ ನೂತನವಾಗಿ ಜಾರಿಯಾದ ಸಂಚಾರ ಪೊಲೀಸ್ ವ್ಯವಸ್ಥೆಗೆ ಎಸ್ಪಿ ಲೋಕೇಶ ಜಗಲಾಸರ ಚಾಲನೆ ನೀಡಿದರು
ಜಮಖಂಡಿ ನಗರದಲ್ಲಿ ನೂತನವಾಗಿ ಜಾರಿಯಾದ ಸಂಚಾರ ಪೊಲೀಸ್ ವ್ಯವಸ್ಥೆಗೆ ಎಸ್ಪಿ ಲೋಕೇಶ ಜಗಲಾಸರ ಚಾಲನೆ ನೀಡಿದರು   

ಜಮಖಂಡಿ: ನಗರದಲ್ಲಿ ಸಂಚಾರದಟ್ಟಣೆ ನಿಯಂತ್ರಿಸುವ ಸಲುವಾಗಿ ನೂತನವಾಗಿ ಜಾರಿಗೆ ತಂದ ಸಂಚಾರ ಪೊಲೀಸ್ ವ್ಯವಸ್ಥೆಗೆ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಚಾಲನೆ ನೀಡಿದರು.

ಇಲ್ಲಿನ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 1,600 ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, 89 ಸಿಬ್ಬಂದಿ ಕೊರತೆ ಇದೆ. ರಾಜ್ಯ ಸರ್ಕಾರ ಶೀಘ್ರ ನೇಮಕಾತಿ ಮಾಡಿಕೊಳ್ಳಲಿದೆ. ಸದ್ಯ ಯಾವುದೇ ತೊಂದರೆ ಇಲ್ಲ’ ಎಂದರು.

‘ಜಮಖಂಡಿ ಜಿಲ್ಲಾ ಕೇಂದ್ರವಾಗುವಂಥ ಸ್ಥಳವಿದ್ದು, ಇಲ್ಲಿ ಸಂಚಾರ ಪೊಲೀಸ್ ಠಾಣೆ ಅವಶ್ಯವಿದ್ದುದನ್ನು ಮನಗಂಡು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್-19 ಬಿಕ್ಕಟ್ಟು ಇರುವದರಿಂದ ಸರ್ಕಾರದ ಆದೇಶದಂತೆ ಹೊಸ ಪ್ರಸ್ತಾವನೆ ಸಲ್ಲಿಸಲು ಅವಕಾಶ ಇಲ್ಲ. ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ನಗರದಲ್ಲಿ ಅಪಘಾತ, ಕಳವು, ದರೋಡೆಗಳಂಥ ಪ್ರಕರಣಗಳ ನಿಯಂತ್ರಣಕ್ಕೆ ಜಮಖಂಡಿ ತಾಲ್ಲೂಕಿನಲ್ಲಿ ಸಂಸದರ ನಿಧಿಯಿಂದ 50ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಖರೀದಿಸಿದ್ದು, ಶೀಘ್ರದಲ್ಲೇ ಅಳವಡಿಸಲಾಗುತ್ತದೆ’ ಎಂದರು.

‘ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಟ್ರಾಕ್ಟರ್ ಮಾಲೀಕರು ಹಾಗೂ ಚಾಲಕರ ಸಭೆ ನಡೆಸಿ, ಕಡ್ಡಾಯವಾಗಿ ಟ್ರೇಲರ್‌ಗಳ ಹಿಂದೆ ಕೆಂಪುಪಟ್ಟಿ ಹಾಕಿ ಯಾವುದೇ ಟೇಪ್‌ ಜೋಡಣೆ ಮಾಡದಂತೆ ಸೂಚಿಸುತ್ತೇವೆ’ ಎಂದರು.

ಈ ಸಂದರ್ಭದಲ್ಲಿ ಸಿಪಿಐ ಡಿ.ಕೆ.ಪಾಟೀಲ. ಪಿಎಸ್‌ಐ ಗೋವಿಂದಗೌಡ ಪಾಟೀಲ, ಬಸವರಾಜ ಅವಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.