ಗುಳೇದಗುಡ್ಡ: ಬಾಗಲಕೋಟೆಯ ಜನರು ಹೈದ್ರಾಬಾದ್‌ವರೆಗೆ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಇವರ ಅನುಕೂಲಕ್ಕಾಗಿ ವಿಜಯಪುರ ಹೈದ್ರಾಬಾದ್ ರೈಲನ್ನು ಬಾಗಲಕೋಟೆಯವರೆಗೆ ವಿಸ್ತರಿಸಬೇಕೆಂದು ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮಾಜಿ ಶಾಸಕ ರಾಜಶೇಖರ ಶೀಲವಂತ ಮನವಿ ಮಾಡಿದರು.
ಅವರು ಇತ್ತೀಚೆಗೆ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ‘ಈ ರೈಲನ್ನು ವಿಸ್ತರಿಸಿದರೆ ಇಲ್ಲಿನ ಜನರಿಗೆ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ. ಅಲ್ಲದೇ, ಜನರಿಗೆ ಓಡಾಡಲೂ ನೆರವಾಗಲಿದೆ. ಆದಷ್ಟು ಬೇಗನೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು‘ ಎಂದು ಮನವಿ ಪತ್ರದ ಮೂಲಕ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.