ADVERTISEMENT

‘ಮೂರು ವಾರ್ಷಿಕ ಸಭೆಯಲ್ಲಿ ಭಾಗವಹಿಸಿದರೆ ಮಾತ್ರ ಮತದಾನ ಹಕ್ಕು’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:53 IST
Last Updated 20 ಅಕ್ಟೋಬರ್ 2020, 15:53 IST
ಜಮಖಂಡಿ ಕೋ-ಆಪ್ ಬ್ಯಾಂಕಿನ 80ನೇ ವಾರ್ಷಿಕ ಸದಸ್ಯರ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಜಮಖಂಡಿ ಕೋ-ಆಪ್ ಬ್ಯಾಂಕಿನ 80ನೇ ವಾರ್ಷಿಕ ಸದಸ್ಯರ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಜಮಖಂಡಿ: ಬ್ಯಾಂಕಿನ ಚುನಾವಣೆ ಮತದಾನ ಹಕ್ಕು ಪಡೆಯಲು ಕಡ್ಡಾಯವಾಗಿ ಮೂರು ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅರ್ಬನ್ ಬ್ಯಾಂಕ್ ನಿರ್ದೇಶಕ ಉಮೇಶ ಮಾಹಾಬಳಶೆಟ್ಟಿ ಹೇಳಿದರು.

ಇಲ್ಲಿನ ಬಸವ ಭವನದಲ್ಲಿ ಭಾನುವಾರ ನಡೆದ ಜಮಖಂಡಿ ಕೋ-ಆಪ್ ಬ್ಯಾಂಕಿನ 80ನೇ ವಾರ್ಷಿಕ ಸದಸ್ಯರ ಸಭೆಯಲ್ಲಿ ಮಾತನಾಡಿ, ನಮ್ಮ ಬ್ಯಾಂಕಿನಲ್ಲಿ 27 ಸಾವಿರ ಷೇರುದಾರರಿದ್ದು, 13 ಸಾವಿರ ಕೆವಿಎಸ್ ಮಾಡಲಾಗಿದ್ದು, ಸಿಕೆಆಯ್‌ಸಿಯಲ್ಲಿ ನಿಮ್ಮ ಆಧಾರ ಕಾರ್ಡನ್ನು ಲಿಂಕ್ ಮಾಡುವುದರ ಜೊತೆಯಲ್ಲಿ ಮಾಹಿತಿಯನ್ನು ನೀಡಬೇಕು. ಬ್ಯಾಂಕಿನಲ್ಲಿ ಕನಿಷ್ಠ 2 ರಿಂದ 3 ಸಾವಿರದವರೆಗೆ ಠೇವಣೆ ಮೂಲಕ ವ್ಯವಹಾರ ಹೊಂದಿರಬೇಕು, ಆನ್‌ಲೈನ್ ಮೊಬೈಲ್ ವ್ಯವಹಾರ ಮಾಡುವ ವ್ಯವಸ್ಥೆ ಮಾಡಿದ್ದು, ಮೊಬೈಲ್ ಅಪ್ಲಿಕೇಷನ್‌ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ನಿರ್ದೇಶಕ ಜಿ.ಎಸ್.ನ್ಯಾಮಗೌಡ ಮಾತನಾಡಿ, ಬ್ಯಾಂಕಿಗೆ ಗ್ರಾಹಕರೇ ಮುಖ್ಯವಾಗಿದ್ದು, ಗ್ರಾಹಕರ ಹಿತಕ್ಕಾಗಿ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ADVERTISEMENT

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಎಫ್.ಎ. ಬಾಗವಾನ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಿ.ಆರ್.ತೇಲಿ, ನಿರ್ದೇಶಕ ನಂದೆಪ್ಪ ದಡ್ಡಿಮನಿ, ವಿರುಪಾಕ್ಷಯ್ಯಾ ಕಂಬಿ, ರುದ್ರಯ್ಯಾ ಕರಡಿ, ಈರಣ್ಣಾ ಬಂಡಿಗಣಿ, ಮಾಮೂನ ಪಾರತನಳ್ಳಿ, ರಾಹುಲ್ ಕಲೂತಿ, ಎಸ್.ಎಚ್.ಕುಲ್ಲೋಳಿ, ಪ್ರದೀಪ ಮಹಾಲಿಂಗಪೂರಮಠ, ಬಸವರಾಜ ಕಲೂತಿ,ವೈಶಾಲಿ ಗೊಂದಿ, ಎಸ್.ಪಿ.ಅರಕೇರಿ, ವಿನೋದ ಡಾಗಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.